ಕೊಡಗು:ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ದೇವಸ್ತೂರಿನಲ್ಲಿ ನಡೆದಿದೆ.
ಕೊಡಗು: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು - ಮಡಿಕೇರಿ ತಾಲೂಕಿನ ದೇವಸ್ತೂರಿ ಆತ್ಮಹತ್ಯೆ ಸುದ್ದಿ
ಆತ್ಮಹತ್ಯೆಗೆ ತಾನೇ ಕಾರಣವೆಂದು ಬರೆದು ಒಂಟಿ ನಳಿಕೆಯ ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜೀವನದಲ್ಲಿ ಜಿಗುಪ್ಸೆ ಶಂಕೆ, ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ..
ದೇವಸ್ತೂರು ಗ್ರಾಮದ ನಿವಾಸಿ ಭೀಮಯ್ಯ (47) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 'ನನ್ನ ಆತ್ಮಹತ್ಯೆಗೆ ನಾನೇ ಕಾರಣ'ವೆಂದು ಚೀಟಿ ಬರೆದು ಒಂಟಿ ನಳಿಕೆಯ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಜೀವನದಲ್ಲಿ ಜುಗುಪ್ಸೆಗೊಂಡು ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ.
ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.