ತುಮಕೂರು:ಕಾರು ಕಳುವಾಗಿದೆ ಎಂದು ಸುಳ್ಳು ದೂರು ದಾಖಲಿಸಿದ್ದ ದೂರುದಾರನನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಕಾರು ಕಳುವಾಗಿದೆ ಎಂದು ದೂರು ನೀಡಿದ ಮಾಲೀಕ ಆಂಧ್ರ ಪ್ರದೇಶದ ಮಡಕ್ ಶಿರಾ ಗ್ರಾಮದಲ್ಲಿ ಈಚಲಡ್ಡಿ ಗ್ರಾಮದ ದೊಡ್ಡೇಗೌಡ ಬಂಧಿತ ಆರೋಪಿಯಾಗಿದ್ದಾನೆ. ಸೆಪ್ಟೆಂಬರ್ 21ರಂದು ರಾತ್ರಿ ತನ್ನ ಊರಿಗೆ ಇನೋವಾ ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ದುಷ್ಕರ್ಮಿಗಳು ಕಾರು ಪಂಚರ್ ಆಗಿದೆ ಎಂದು ನಿಲ್ಲಿಸಿ ನನಗೆ ಹಲ್ಲೆ ಮಾಡಿ ಕಾರು ಕದ್ದೊಯ್ದಿದ್ದಾರೆ ಎಂದು ಮಿಡಿಗೇಶಿ ಪೊಲೀಸ್ ಠಾಣೆಗೆ ದೊಡ್ಡೇಗೌಡ ದೂರು ನೀಡಿದ್ದ.
ಕಾರು ಕಳುವಾಗಿದೆ ಎಂದು ದೂರು ನೀಡಿದ ಮಾಲೀಕ ಈ ಸಂಬಂಧ ಮಿಡಿಗೇಶಿ ಪೊಲೀಸರು ಮಾಹಿತಿ ಸಂಗ್ರಹಿಸಿ ದೊಡ್ಡೇಗೌಡನನ್ನು ವಿಚಾರಣೆಗೆ ಒಳಪಡಿಸಿದಾಗ ಸುಳ್ಳು ದೂರು ನೀಡಿರುವುದಾಗಿ ಬೆಳಕಿಗೆ ಬಂದಿದೆ. ಕಾರಿನ ಮೇಲೆ ಸಾಲ ಇದ್ದ ಕಾರಣ ಇನೋವಾ ಕಾರನ್ನು ಆಂಧ್ರ ಪ್ರದೇಶದ ರಂಗಪುರ ಗ್ರಾಮದ ಸಂಬಂಧಿಕರೊಬ್ಬರ ಮನೆಯಲ್ಲಿ ಬಚ್ಚಿಟ್ಟಿರುವ ವಿಷಯವನ್ನು ದೊಡ್ಡೇಗೌಡ ಒಪ್ಪಿಕೊಂಡಿದ್ದಾನೆ. ಕಾರನ್ನು ವಶಕ್ಕೆ ತೆಗೆದುಕೊಂಡಿರುವ ಮಿಡಿಗೇಶಿ ಪೊಲೀಸರು, ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಕಾರು ಕಳುವಾಗಿದೆ ಎಂದು ದೂರು ನೀಡಿದ ಮಾಲೀಕ ಇದನ್ನೂ ಓದಿ:₹2 ಕೋಟಿ ಮೌಲ್ಯದ ಫೆರಾರಿ ಕಾರು ಕಳ್ಳತನ ಮಾಡಲು ಸಂಚು.. ದೆಹಲಿ ಮೂಲದ ಕಾರು ವ್ಯಾಪಾರಿ ಬಂಧನ