ಕರ್ನಾಟಕ

karnataka

ETV Bharat / jagte-raho

ತಂಬಾಕು ಕಾರ್ಖಾನೆಯಿಂದ 831 ಕೋಟಿ ರೂ. ಜಿಎಸ್‌ಟಿ ವಂಚನೆ, ಓರ್ವ ಅರೆಸ್ಟ್​ - ಜಿಎಸ್‌ಟಿ

ಯಾವುದೇ ನೋಂದಣಿಯಿಲ್ಲದೇ ಮತ್ತು ತೆರಿಗೆ ಪಾವತಿಸದೆ ತಂಬಾಕು ಉತ್ಪನ್ನಗಳನ್ನು ತಯಾರಿಸುತ್ತಿದ್ದ ದೆಹಲಿಯ ತಂಬಾಕು ಕಾರ್ಖಾನೆಯೊಂದು 831.72 ಕೋಟಿ ರೂ. ಜಿಎಸ್‌ಟಿ ವಂಚಿಸಿದೆ.

GST evasion of Rs 831 cr unearthed in Delhi
ಜಿಎಸ್‌ಟಿ ವಂಚನೆ

By

Published : Jan 3, 2021, 5:08 PM IST

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿನ ತಂಬಾಕು ಕಾರ್ಖಾನೆಯೊಂದು ಬರೋಬ್ಬರಿ 831.72 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಓರ್ವನನ್ನು ಜಿಎಸ್‌ಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಯಾವುದೇ ನೋಂದಣಿಯಿಲ್ಲದೇ ಮತ್ತು ತೆರಿಗೆ ಪಾವತಿಸದೆ ಕಾರ್ಖಾನೆಯೊಂದು ತಂಬಾಕು ಉತ್ಪನ್ನಗಳನ್ನು ತಯಾರಿಸುತ್ತಿದೆ ಮತ್ತು ಪೂರೈಸುತ್ತಿದೆ ಎಂಬ ಮಾಹಿತಿ ಪಡೆದ ದೆಹಲಿ ಪಶ್ಚಿಮ ವಿಭಾಗದ ಜಿಎಸ್‌ಟಿ ಆಯುಕ್ತರ ನೇತೃತ್ವದ ತಂಡ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.

ಇದನ್ನೂ ಓದಿ: ಸ್ಮಶಾನದ ಕಾಂಪೌಂಡ್​ ಕುಸಿತ: 17 ಜನರ ದುರ್ಮರಣ, ಅವಶೇಷದಡಿ ಹಲವು ಮಂದಿ

ಹೀಗೆ ಅಕ್ರಮವಾಗಿ ಉತ್ಪಾದಿಸಿದ ಗುಟ್ಕಾ, ಪಾನ್​ ಮಸಾಲದಂತಹ ತಂಬಾಕು ಉತ್ಪನ್ನಗಳನ್ನು ಭಾರತದ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ. ಒಟ್ಟು 831.72 ಕೋಟಿ ರೂ. ಸುಂಕ ವಂಚನೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ ಎಂದು ತೆರಿಗೆ ಆಯುಕ್ತರು ತಿಳಿಸಿದ್ದಾರೆ.

ಓರ್ವ ಆರೋಪಿಯನ್ನು ಬಂಧಿಸಿ ಪಟಿಯಾಲಾ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 4 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್​ ಆದೇಶ ನೀಡಿದೆ.

ABOUT THE AUTHOR

...view details