ಸಹರಾನ್‌ಪುರ (ಉತ್ತರ ಪ್ರದೇಶ):ರಸ್ತೆ ಅಪಘಾತದಲ್ಲಿ ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ಮೃತಪಟ್ಟ ಸುದ್ದಿ ಕೇಳಿ ಅಜ್ಜಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಹರಾನ್‌ಪುರ ಜಿಲ್ಲೆಯ ಮಜ್ರಾ ಭೋಜೇವಾಲಾ ಎಂಬ ಗ್ರಾಮದಲ್ಲಿ ಬೈಕ್ಗೆ ಕಾರು ಡಿಕ್ಕಿ ಹೊಡೆದು ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಸಾವನ್ನಪ್ಪಿದ್ದಾರೆ. ಸೊಸೆ ಹಾಗೂ ಮೊಮ್ಮಕ್ಕಳ ಸಾವಿನ ವಿಚಾರ ಕೇಳುತ್ತಿದ್ದಂತೆಯೇ 60 ವರ್ಷದ ವೃದ್ಧೆಯ ಪ್ರಾಣಪಕ್ಷಿ ಕೂಡ ಹಾರಿಹೋಗಿದೆ.