ಯಾದಗಿರಿ:ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಜಮೀನಿನ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಸುರಪುರ ತಾಲೂಕಿನ ಹದನೂರ ಗ್ರಾಮದಲ್ಲಿ ನಡೆದಿದೆ.
ಹತ್ತಿ ಬೆಳೆ ನಡುವೆ ಅಕ್ರಮ ಗಾಂಜಾ ಗಿಡ: ಅಧಿಕಾರಿಗಳ ದಾಳಿ ವೇಳೆ ಆರೋಪಿಗಳು ಪರಾರಿ - ಮಹಾದೇವಿಬಾಯಿ ಹಾಗೂ ತಹಶಿಲ್ದಾರ್ ನೇತೃತ್ವ
ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಜಮೀನಿನ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಸುರಪುರ ತಾಲೂಕಿನ ಹದನೂರ ಗ್ರಾಮದಲ್ಲಿ ನಡೆದಿದೆ.

ಹತ್ತಿ ಬೆಳೆ ನಡುವೆ ಅಕ್ರಮ ಗಾಂಜಾ, ಅಧಿಕಾರಿಗಳ ದಾಳಿ ಆರೋಪಿಗಳು ಪರಾರಿ
ಗ್ರಾಮದ ನಾಗಪ್ಪ ನಾಯ್ಕೋಡಿ, ಜೆಟ್ಟೆಪ್ಪ ನಾಯ್ಕೋಡಿ ಎಂಬುವವರು ತಮ್ಮ ಹೊಲದಲ್ಲಿ ಹತ್ತಿ ಬೆಳೆ ಮಧ್ಯೆ ಗಾಂಜಾ ಗಿಡ ಬೆಳೆದಿದ್ದು, ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಬಕಾರಿ ಜಂಟಿ ನಿರ್ದೇಶಕ ಕಲಬುರಗಿ ವಿಭಾಗದ ಎಸ್.ಜೆ.ಕುಮಾರ್ ಆದೇಶದ ಮೇರೆಗೆ ಉಪ ಆಯುಕ್ತರಾದ ಮಹಾದೇವಿಬಾಯಿ ಹಾಗೂ ತಹಶಿಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 5 ಲಕ್ಷ 40 ಸಾವಿರ ರೂ. ಮೌಲ್ಯದ 53 ಗಿಡಗಳನ್ನು ಜಪ್ತಿ ಮಾಡಲಾಗಿದೆ.
ಹತ್ತಿ ಬೆಳೆ ನಡುವೆ ಅಕ್ರಮ ಗಾಂಜಾ ಗಿಡ... ಅಧಿಕಾರಿಗಳ ದಾಳಿ
ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.