ಗಾಂಧಿನಗರ: ಗುಜರಾತ್ನ ಪಶ್ಚಿಮ ಕಚ್ನಲ್ಲಿ ಐಎಸ್‌ಐ (ಇಂಟರ್ ಸರ್ವೀಸ್ ಇಂಟೆಲಿಜೆನ್ಸ್) ಏಜೆಂಟ್ವೊಬ್ಬನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.
ಗುಜರಾತ್ನ ಮುಂಡ್ರಾ ಡಾಕ್ಯಾರ್ಡ್ನಲ್ಲಿ ಮೇಲ್ವಿಚಾರಕನಾಗಿರುವ ರಜಾಕ್ಬಾಯ್ ಕುಂಭಾರ್ ಎಂಬಾತ ಐಎಸ್‌ಐ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿತ್ತು. ಉತ್ತರಪ್ರದೇಶದ ರಕ್ಷಣಾ ಹಾಗೂ ಐಎಸ್‌ಐ ಪ್ರಕರಣದ ತನಿಖೆ ಸಂಬಂಧ ರಜಾಕ್ಬಾಯ್ ಕುಂಭಾರ್ನನ್ನು ಸೋಮವಾರ ಅರೆಸ್ಟ್ ಮಾಡಿರುವುದಾಗಿ ರಾಷ್ಟ್ರೀಯ ತನಿಖಾ ದಳ (NIA) ಮಾಹಿತಿ ನೀಡಿದೆ.