ಮುಂಬೈ :ಮೂರು ಪ್ರತ್ಯೇಕ ಡ್ರಗ್ಸ್ ಜಾಲಗಳಿಗೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ದಳ (ಎನ್ಸಿಬಿ) ಐದು ಜನರನ್ನು ವಶಕ್ಕೆ ಪಡೆದಿದೆ. ಇದರಲ್ಲಿ ಓರ್ವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಡ್ರಗ್ಸ್ ಲಿಂಕ್ ಕುರಿತ ಕೇಸ್ಗೆ ಸಂಬಂಧಪಟ್ಟವನಾಗಿದ್ದಾನೆ.
ಐವರು ಡ್ರಗ್ಸ್ ಪೆಡ್ಲರ್ಸ್ ಎನ್ಸಿಬಿ ವಶಕ್ಕೆ, ಸುಶಾಂತ್ ಡೆತ್ ಕೇಸ್ನಲ್ಲಿ ಓರ್ವನ ನಂಟು - ಚರಾಸ್
ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಚಕ್ರವರ್ತಿ ಅರೆಸ್ಟಾದ ಬಳಿಕ ಡ್ರಗ್ಸ್ ಲಿಂಕ್ ಕುರಿತ ತನಿಖೆ ಸಂಬಂಧ ಮುಂಬೈನ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ಎನ್ಸಿಬಿ ಈಗಾಗಲೇ 6 ಮಂದಿ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದೆ..
ಸುಶಾಂತ್ ಡೆತ್ ಕೇಸ್
ಡ್ರಗ್ಸ್ ಪೆಡ್ಲರ್ ರಾಹುಲ್ ವಿಶ್ರಮ್, ನಟ ಸುಶಾಂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದ ಆರೋಪಿ. ಇತರ ಪೆಡ್ಲರ್‌ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ. ಈತನ ಬಳಿ 1 ಕೆಜಿ ಚರಸ್ (ಒಂದು ಬಗೆಯ ಡ್ರಗ್) ಹಾಗೂ ₹4.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಚಕ್ರವರ್ತಿ ಅರೆಸ್ಟಾದ ಬಳಿಕ ಡ್ರಗ್ಸ್ ಲಿಂಕ್ ಕುರಿತ ತನಿಖೆ ಸಂಬಂಧ ಮುಂಬೈನ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ಎನ್ಸಿಬಿ ಈಗಾಗಲೇ 6 ಮಂದಿ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದೆ.