ಮೈಸೂರು: ಕಾಡು ಪ್ರಾಣಿಗಳ ಬೇಟೆಗೆ ಸಿಡಿಮದ್ದು ಹಾಕಿ ಇರಿಸಿದ್ದ ಆಹಾರವನ್ನು ತಿಂದು ಹಸು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು: ಕಾಡು ಪ್ರಾಣಿಗಳ ಬೇಟೆಗೆ ಇರಿಸಿದ್ದ ಸಿಡಿಮದ್ದು ತಿಂದು ಹಸು ಸಾವು..
ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ವೆಂಕಟರಾಮು ಎಂಬುವವರ ಹಸುವಿನ ಮುಖ ಛಿದ್ರವಾಗಿ ಸಾವಿಗೀಡಾಗಿದೆ. ಗ್ರಾಮದ ಕೆರೆಯ ಸಮೀಪದ ಪೊದೆಯ ಬಳಿ ಹಂದಿಗಳು ಬರುತ್ತವೆ ಎಂದು ಸಿಡಿಮದ್ದನ್ನು ತಯಾರಿಸಿ ಇಟ್ಟಿದ್ದ ಚಿಕ್ಕನಾಯಕ ಎಂಬ ವ್ಯಕ್ತಿಯನ್ನು ನಂಜನಗೂಡು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಈತ ನಾಟಿ ಸಿಡಿಮದ್ದು ತಯಾರಿಸಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.