ಕರ್ನಾಟಕ

karnataka

ETV Bharat / jagte-raho

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಕಬಳಿಸಲು ಯತ್ನ: ಮೂವರ ಬಂಧನ - ಲಕ್ಷ್ಮೀಪುರಂ ಠಾಣೆಗೆ ದೂರು

ಬಂಧಿತರು ಗೌಸಿಯ ನಗರದ ಮೊಹಮದ್ ನಯಿಂ, ಮುಬಾರಕ್ ಷರೀಫ್, ಶಹಜಾನ್ ಆಗಿದ್ದು, ಯಾದವಗಿರಿಯ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮೂಡಾ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸಿದ್ದಾರೆ.

Mysore Urban Development Authority
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ

By

Published : Jan 6, 2021, 4:23 PM IST

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನಿಸಿದ ಮೂವರನ್ನು ಲಕ್ಷ್ಮೀಪುರಂ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಓದಿ: ಸ್ನೇಹಿತನ ಕೊಲೆ ಮಾಡಿ ಶವವನ್ನು ನೀರಿನ ಸಂಪ್​​​​ಗೆ ಎಸೆದಿದ್ದ ಹಂತಕ ಅಂದರ್​​​

ಗೌಸಿಯ ನಗರದ ಮೊಹಮದ್ ನಯಿಂ, ಮುಬಾರಕ್ ಷರೀಫ್, ಶಹಜಾನ್ ಬಂಧಿತರಾಗಿದ್ದು, ಇವರು ಯಾದವಗಿರಿಯ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮೂಡಾ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸಿದ್ದಾರೆ.

ಈ ಸಂದರ್ಭ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡುವಾಗ ನಕಲಿ ದಾಖಲೆ ಸೃಷ್ಟಿಸಿದ್ದು ಕಂಡುಬಂದಿದೆ. ಇದರ ವಿರುದ್ಧ ಮೂಡ ಆಯುಕ್ತ ಡಾ. ಡಿ.ಬಿ.ನಟೇಶ್ ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಐದು ಜನರಲ್ಲಿ ಮೂವರನ್ನು ಬಂಧಿಸಲಾಗಿದೆ.

ಮೂಡಾದಲ್ಲಿ ದಿನದಿಂದ ದಿನಕ್ಕೆ ವಂಚನೆ ಜಾಲಗಳು ಪತ್ತೆ ಆಗುತಿದ್ದು, ಇದರಲ್ಲಿ ಮೂಡಾದ ಕೆಲವು ಅಧಿಕಾರಿಗಳು ಸಹ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ABOUT THE AUTHOR

...view details