ಕರ್ನಾಟಕ

karnataka

ETV Bharat / jagte-raho

ಬೀಗ ಹಾಕಿರುವ ಮನೆಗಳೇ ಕನ್ನ ಹಾಕ್ತಿದ್ದವರಿಗೆ ಕೋಳ ಹಾಕಿದ ಪೊಲೀಸರು! - ಆರೋಪಿಗಳ ಬಂಧನ

ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

mysore crime news
ಆರೋಪಿಗಳ ಬಂಧನ

By

Published : Jan 15, 2020, 4:29 AM IST

ಮೈಸೂರು:ರಾತ್ರಿ ಸಮಯದಲ್ಲಿ ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ದೋಚುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ 8 ಲಕ್ಷ ರೂ. ಮೌಲ್ಯದ 190 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಬಿ.ಎಂ.ಶ್ರೀ.ನಗರದ ನಿವಾಸಿಗಳಾದ ಮಧು(20), ಕಿರಣ್ (21), ವಿಜಯ್ (20) ಬಂಧಿತರು.

ಆರೋಪಿಗಳ ಬಂಧನ

ಬಿ.ಎಂ.ಶ್ರೀ.ನಗರದ ಗ್ಯಾಸ್ ಗೋದಾಮಿನ ಹತ್ತಿರ ಇರುವ ಟೀ ಅಂಗಡಿ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಜ.4ರಂದು ಕಳಸ್ತವಾಡಿ ಗ್ರಾಮದ ಮನೆಯೊಂದರ ಬೀಗ ಮುರಿದು, ಚಿನ್ನಾಭರಣ ಕದ್ದಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ABOUT THE AUTHOR

...view details