ಬೆಂಗಳೂರು: ರೌಡಿಶೀಟರ್ ಸಹಚರನೊಬ್ಬನನ್ನು ಮುಖ ಗುರುತು ಸಿಗದಷ್ಟು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜಪೇಟೆಯ ಅಜಾದ್ ನಗರದ 5ನೇ ಕ್ರಾಸ್ ಬಳಿ ನಡೆದಿದೆ.
ಮುಖ ಗುರುತು ಸಿಗದಂತೆ ರೌಡಿಶೀಟರ್ ಸೈಕಲ್ ರವಿ ಸಹಚರನ ಬರ್ಬರ ಹತ್ಯೆ - ರೌಡಿಶೀಟರ್ ಸೈಕಲ್ ರವಿ ಸಹಚರನಾಗಿದ್
ರೌಡಿಶೀಟರ್ ಸಹಚರನೊಬ್ಬನನ್ನು ಮುಖ ಗುರುತು ಸಿಗದಷ್ಟು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜಪೇಟೆಯ ಅಜಾದ್ ನಗರದ 5ನೇ ಕ್ರಾಸ್ ಬಳಿ ನಡೆದಿದೆ.

ಲೋಕೇಶ್ ಅಲಿಯಾಸ್ ಸ್ಮಶಾನ ಲೋಕಿ (35) ಕೊಲೆಯಾದ ವ್ಯಕ್ತಿ. ರೌಡಿಶೀಟರ್ ಸೈಕಲ್ ರವಿ ಸಹಚರನಾಗಿದ್ದ ಈತ ನಿನ್ನೆ ರಾತ್ರಿ ಆಜಾದ್ ನಗರಕ್ಕೆ ಬೈಕ್ನಲ್ಲಿ ಬಂದಿದ್ದನಂತೆ. ಈ ವೇಳೆ ಕಾದು ಕುಳಿತಿದ್ದ ಮೂವರು ದುಷ್ಕರ್ಮಿಗಳು ಲೋಕೇಶ್ನನ್ನು ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಕೊಲೆಯಾದ ಲೋಕೇಶ್ ನಾಗರಬಾವಿ ನಿವಾಸಿಯಾಗಿದ್ದು, ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ. ಹಾಗೆಯೇ ಈತ ನಗರದಲ್ಲಿನ ಕುಖ್ಯಾತ ರೌಡಿ ಸೈಕಲ್ ರವಿ ಜೊತೆ ಸ್ನೇಹ ಹೊಂದಿದ್ದ. ಹೀಗಾಗಿ ಹಳೇ ದ್ವೇಷ ಅಥವಾ ಹುಡಗಿ ವಿಚಾರಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಚಾಮರಾಜಪೇಟೆ ಪೊಲೀಸರು ಬಲೆ ಬೀಸಿದ್ದಾರೆ.