ಕರ್ನಾಟಕ

karnataka

ETV Bharat / jagte-raho

ಹುಲಿಕುಂಟೆಯಲ್ಲಿ ಮಧ್ಯರಾತ್ರಿ ದುಷ್ಕರ್ಮಿಗಳಿಂದ ಯುವಕನ ಬರ್ಬರ ಕೊಲೆ - Doddaballapur Crime

ದೊಡ್ಡಬಳ್ಳಾಪುರದ ಹುಲಿಕುಂಟೆ ಗ್ರಾಮದಲ್ಲಿ ಯುವಕನೋರ್ವ ಬರ್ಬರವಾಗಿ ಕೊಲೆಯಾಗಿದ್ದು, ಹೆದ್ದಾರಿಯಲ್ಲಿ ಲಾರಿಗಳಿಂದ ಡಿಸೇಲ್ ಕದಿಯುತ್ತಿದ್ದ ದುಷ್ಕರ್ಮಿಗಳ ತಂಡ ಈ ಕೃತ್ಯವೆಸಗಿರುವ ಅನುಮಾನ ವ್ಯಕ್ತವಾಗಿದೆ.

ಮಂಜುನಾಥ್
ಮಂಜುನಾಥ್

By

Published : Aug 16, 2020, 10:23 AM IST

Updated : Aug 16, 2020, 10:46 AM IST

ದೊಡ್ಡಬಳ್ಳಾಪುರ: ಹುಲಿಕುಂಟೆ ಗ್ರಾಮದಲ್ಲಿ ಯುವಕನೋರ್ವನ ಬರ್ಬರ ಕೊಲೆಯಾಗಿದೆ. ಹೆದ್ದಾರಿಯಲ್ಲಿ ಲಾರಿಗಳಿಂದ ಡಿಸೇಲ್ ಕದಿಯುತ್ತಿದ್ದ ದುಷ್ಕರ್ಮಿಗಳ ತಂಡ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

ಮಂಜುನಾಥ್ (22) ಹತ್ಯೆಗೀಡಾಗಿರುವ ಯುವಕ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ಹುಲಿಕುಂಟೆ ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿ 207 ಹಾದು ಹೋಗಿದ್ದು, ಸ್ಥಳೀಯ ಯುವಕರ ಗ್ಯಾಂಗ್ ಮಧ್ಯರಾತ್ರಿ ಬರುತ್ತಿದ್ದ ಲಾರಿಗಳಿಂದ ಡಿಸೇಲ್ ಕದಿಯುತ್ತಿದ್ದರು. ಇದೇ ವಿಚಾರಕ್ಕೆ ಲಾರಿ ಚಾಲಕರು ಮತ್ತು ಯುವಕರ ಗ್ಯಾಂಗ್ ನಡುವೆ ಗಲಾಟೆಯಾಗಿತ್ತು. ಈ ವೈಷಮ್ಯದ ಹಿನ್ನೆಲೆ ನೀರು ಕೇಳುವ ನೆಪದಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಹೆದ್ದಾರಿ ಪಕ್ಕದಲ್ಲಿರುವ ಮಂಜುನಾಥ್​ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.

ದುಷ್ಕರ್ಮಿಗಳಿಂದ ಯುವಕನ ಬರ್ಬರ ಕೊಲೆ

ಮಂಜುನಾಥ್ ಗಂಭೀರವಾಗಿ ಹಲ್ಲೆಗೊಳಗಾದ ಹಿನ್ನೆಲೆಯಲ್ಲಿ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಹಲ್ಲೆಯಲ್ಲಿ ಮೃತ ಮಂಜುನಾಥ್ ತಾಯಿ ಲಲಿತಮ್ಮ ಸಹ ಗಾಯಗೊಂಡಿದ್ದಾರೆ.

ಆಸ್ತಿಯ ವಿವಾದಕ್ಕೆ ಕೊಲೆಯ ಶಂಕೆ..?:ಮೃತ ಮಂಜುನಾಥ್ ತಂದೆ ಇಬ್ಬರನ್ನು ಮದುವೆಯಾಗಿದ್ದು, ತುಮಕೂರಿನ ಅರಳೂರಿನಲ್ಲಿ ಒಂದು ಸಂಸಾರ ಮತ್ತು ಹುಲಿಕುಂಟೆ ಗ್ರಾಮದಲ್ಲಿ ಮತ್ತೊಂದು ಸಂಸಾರ ನಡೆಸುತ್ತಿದ್ದರು. ಮಂಜುನಾಥ್ ತನ್ನ ತಾಯಿ ಜೊತೆ ಹುಲಿಕುಂಟೆ ಗ್ರಾಮದಲ್ಲಿ ವಾಸವಾಗಿದ್ದ. ಎರಡು ಕುಟುಂಬ ನಡುವೆ ಆಸ್ತಿ ವಿಚಾರಕ್ಕೆ ಜಗಳವಾಗಿದ್ದು, ಈ ವಿಚಾರಕ್ಕೆ ಕೊಲೆಯಾಗಿರುವ ಸಂಶಯವೂ ವ್ಯಕ್ತವಾಗಿದೆ.

ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಡಿವೈಎಸ್ಪಿ ರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Aug 16, 2020, 10:46 AM IST

ABOUT THE AUTHOR

...view details