ಬೆಂಗಳೂರು:ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಸುಭಾನ್ (30) ಕೊಲೆಯಾದ ವ್ಯಕ್ತಿ. ಡಿಜೆ ಹಳ್ಳಿಯ ಶ್ಯಾಂಪುರ ರೈಲ್ವೆ ಗೇಟ್ ಬಳಿ ಸುಭಾನ್ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಇಲ್ಲಿ ಮೃತದೇಹವನ್ನು ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.