ಚಿಕ್ಕಮಗಳೂರು:ಕೌಟುಂಬಿಕ ಕಲಹದ ಹಿನ್ನೆಲೆ ತಮ್ಮನೇ ಅಣ್ಣನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಸೀಕೆ ಗ್ರಾಮದಲ್ಲಿ ನಡೆದಿದೆ.
ಕೌಟುಂಬಿಕ ಕಲಹ: ದೊಣ್ಣೆಯಿಂದ ಹೊಡೆದು ಅಣ್ಣನನ್ನು ಕೊಂದ ತಮ್ಮ - Seeke village of Balehonnur in Chikkamagalur district
ತಂದೆ ಮೇಲೆ ಹಲ್ಲೆ ಮಾಡುತ್ತಿದ್ದ ಅಣ್ಣನನ್ನು ತಮ್ಮನೇ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿ ನಡೆದಿದೆ.
ಅಣ್ಣನನ್ನು ಕೊಂದ ತಮ್ಮ
ದರ್ಶನ್ (26) ಮೃತ ವ್ಯಕ್ತಿ. ದರ್ಶನ್ ಕುಡಿದ ಮತ್ತಿನಲ್ಲಿ ತಂದೆ ಅಣ್ಣೇಗೌಡನ ಮೇಲೆ ಹಲ್ಲೆ ನಡೆಸುತ್ತಿದ್ದ. ಈ ವೇಳೆ ತಮ್ಮ ಹರ್ಷನ್ ತಡೆಯಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ದರ್ಶನ್, ಸಹೋದರ ಹರ್ಷನ್ ಮೇಲೆ ಕತ್ತಿ ಬೀಸಿದ್ದಾನೆ. ಅದರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹರ್ಷನ್ ದೊಣ್ಣೆ ಬೀಸಿದ್ದಾನೆ.
ಈ ವೇಳೆ ದರ್ಶನ್‌ಗೆ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಣ್ಣೇಗೌಡ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಹರ್ಷನ್ನನ್ನು ಬಂಧಿಸಿದ್ದಾರೆ.
Last Updated : Jan 8, 2021, 9:32 PM IST