ತಂಜಾವೂರು: ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ತಾಯಿ, ಮಗಳು, ಮೊಮ್ಮಕ್ಕಳು ಹಾಗೂ ಸಾಕು ನಾಯಿಗಳು ಮೃತದೇಹಗಳು ಪತ್ತೆಯಾಗಿವೆ. ನೇಣು ಬಿಗಿದ ತಾಯಿ, ಮಗಳು ಸಾವನ್ನಪ್ಪಿದ್ದರೆ, ವಿಷ ಸೇವಿಸಿ ಮೊಮ್ಮಕ್ಕಳು ಹಾಗೂ ಎರಡು ಶ್ವಾನಗಳು ಮೃತಪಟ್ಟಿರುವುದು ಕಂಡು ಬಂದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ, ಮಗಳು... ವಿಷ ಸೇವಿಸಿದ ಸ್ಥಿತಿಯಲ್ಲಿ ಮೊಮ್ಮಕ್ಕಳ ಮೃತದೇಹ ಪತ್ತೆ - hanging
ತಮಿಳುನಾಡಿನ ತಂಜಾವೂರಿನ ಪಟ್ಟುಕೊಟ್ಟೈಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ತಾಯಿ, ಮಗಳು, ಮೊಮ್ಮಕ್ಕಳು ಹಾಗೂ ಸಾಕು ನಾಯಿಗಳು ಮೃತದೇಹಗಳು ಪತ್ತೆಯಾಗಿವೆ.
ತಮಿಳುನಾಡಿನ ತಂಜಾವೂರಿನ ಪಟ್ಟುಕೊಟ್ಟೈಯಲ್ಲಿ ಬಾಡಿಗೆ ಮನೆಯಲ್ಲಿ ಶಾಂತಿ (50) ಎಂಬವರು ತನ್ನ ಮಗಳಾದ ತುಳಸಿ ದೇವಿ (23) ಜೊತೆ ವಾಸವಿದ್ದರು. ತುಳಸಿ ದೇವಿಗೆ ಎರಡು ವರ್ಷ ಹಾಗೂ 8 ತಿಂಗಳ ಎರಡು ಹೆಣ್ಣು ಮಕ್ಕಳಿದ್ದಾರೆ. ನಿನ್ನೆ ಮನೆಯಿಂದ ಯಾರೊಬ್ಬರೂ ಹೊರ ಬರದಿದ್ದನ್ನು ಗಮನಿಸಿದ ಮನೆ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮ ಆಡಳಿತಾಧಿಕಾರಿಯ ಜೊತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಮನೆ ಬಾಗಿಲು ಒಡೆದು ನೋಡಿದರೆ ಎಲ್ಲರೂ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಮೊದಲು ಮೊಮ್ಮಕ್ಕಳು ಹಾಗೂ ನಾಯಿಗಳಿಗೆ ವಿಷವುಣಿಸಿ, ಬಳಿಕ ಶಾಂತಿ ಹಾಗೂ ತುಳಸಿ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟುಕೊಟ್ಟೈ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.