ಬೆಂಗಳೂರು:ಮನೆಯ ಟೆರೇಸ್ ಮೇಲೆ ಸುಮಾರು 200ಕ್ಕೂ ಹೆಚ್ಚು ಗಾಂಜಾ ಗಿಡಗಳನ್ನು ಬೆಳೆಸಿದ್ದ ಆರೋಪಿಯನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ಕೀರ್ತಿ ಚಕ್ರವರ್ತಿ ಬಂಧಿತ ಆರೋಪಿಯಾಗಿದ್ದು, ಈತ ಗಾಂಜಾ ವ್ಯಸ್ಯನಿಯಾಗಿದ್ದ. ರೇಸ್ ಕೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಈತ, ಹೆಂಡತಿ-ಮಕ್ಕಳಿಂದ ದೂರವಾಗಿ ಹೆಬ್ಬಾಳದ ಮನೆಯಲ್ಲಿ ಉಳಿದುಕೊಂಡಿದ್ದ. ವೈಯಕ್ತಿಕ ಕಲಹ ಹಿನ್ನೆಲೆ ಹೆಂಡತಿ-ಮಕ್ಕಳು ದೂರವಾದಾಗಿನಿಂದ ಗಾಂಜಾಗೆ ಅಡಿಕ್ಟ್ ಆಗಿದ್ದನಂತೆ.
ಲಾಕ್ಡೌನ್ ವೇಳೆ ಗಾಂಜಾ ಸಿಗದ ಹಿನ್ನೆಲೆ ತಾನೇ ಬೆಳೆಯೋಕೆ ಮುಂದಾಗಿದ್ದ. ರಸ್ತೆಯಿಂದ ಟೆರೇಸ್ ನೋಡಿದವರಿಗೆ ಗಾರ್ಡನ್ ಥರ ಕಾಣುವಂತೆ ಮಾಡಿದ್ದ. ಪರಿಚಯಸ್ಥರು ಯಾರೇ ಬಂದರೂ ಗಾರ್ಡನ್ ಪ್ರವೇಶಿಸಲು ಬಿಡುತ್ತಿರಲಿಲ್ಲ. ಹೂ ಕುಂಡಗಳ ಮಧ್ಯೆಯೇ ಗಾಂಜಾ ಗಿಡಗಳನ್ನು ಬೆಳೆದಿದ್ದ ಚಕ್ರವರ್ತಿ, ಗಾಂಜಾ ಗಿಡಗಳನ್ನು ಒಣಗಿಸಿ ಅದನ್ನೇ ಪುಡಿ ಮಾಡಿ ಸೇವಿಸುವ ರೂಢಿ ಮಾಡಿಕೊಂಡಿದ್ದನಂತೆ.