ಕರ್ನಾಟಕ

karnataka

ETV Bharat / jagte-raho

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೊಬೈಲ್ ಕಳ್ಳ: ಪ್ರಯಾಣಿಕರೇ ಈತನ ಟಾರ್ಗೆಟ್​​!

ಮುಬಾರಕ್ ಬಂಧಿತ ಆರೋಪಿಯಾಗಿದ್ದು, 5 ಲಕ್ಷ ರೂ. ಮೌಲ್ಯದ 101 ಮೊಬೈಲ್ ಫೋನ್​​​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

mobile thief arrested in bengaluru
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೊಬೈಲ್ ಕಳ್ಳ

By

Published : Dec 25, 2020, 7:05 PM IST

ಬೆಂಗಳೂರು: ನಗರ ಸಾರಿಗೆ ಬಸ್ ಕಿಟಕಿಯ ಬಳಿ ಕುಳಿತು ಮಾತನಾಡುವವರ ಮೊಬೈಲ್ ಕದಿಯುತ್ತಿದ್ದ ಖದೀಮನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೊಬೈಲ್ ಕಳ್ಳ

ಮುಬಾರಕ್ ಬಂಧಿತ ಆರೋಪಿಯಾಗಿದ್ದು, 5 ಲಕ್ಷ ರೂ. ಮೌಲ್ಯದ 101 ಮೊಬೈಲ್ ಫೋನ್​​​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಓದಿ: ಕಮೋಡ್​ನಲ್ಲಿ ನೋಟುಗಳನ್ನ ಹಾಕಿ ಫ್ಲಶ್​ ಮಾಡಿದ ಭೂಪ.. ವಿಡಿಯೋ ವೈರಲ್

ನಗರದಲ್ಲಿ ಓಡಾಡುವ ಬಿಎಂಟಿಸಿ ಬಸ್ ಕಿಟಕಿ ಬಳಿ ಕುಳಿತು ಮೊಬೈಲ್​​ನಲ್ಲಿ ಮಾತನಾಡುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಅಶೋಕ ನಗರ ಠಾಣೆ ಎಎಸ್ಐ ದೇವರಾಜು ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಠಾಣೆಗೆ ಆರೋಪಿಯನ್ನು ಕರೆ ತಂದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.

ABOUT THE AUTHOR

...view details