ನವದೆಹಲಿ:ದೆಹಲಿಯ ಶ್ರೀರಾಮ್ ಕಾಲೋನಿಯಲ್ಲಿರುವ ಮಸೀದಿಯ ಟೆರೇಸ್ ಮೇಲೆ 10 ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದ್ದು, ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜ.7 ರಂದು ಸಂಜೆ ಮಸೀದಿಗೆ ಹೋಗಿದ್ದ ಫರ್ಹಾನ್ ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಕೂಡಲೇ ಬಾಲಕನ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಬಾಲಕನ ಮೃತದೇಹ ಮಸೀದಿಯ ಟೆರೇಸ್ನಲ್ಲಿದ್ದ ನಿರ್ಮಾಣ ಸಾಮಗ್ರಿಗಳ ಅಡಿಯಲ್ಲಿ ಪತ್ತೆಯಾಗಿದೆ.