ಮಂಡ್ಯ :ಚಿಕ್ಕ ವಯಸ್ಸಿನಲ್ಲಿ ಅಪರಾಧ ಮಾಡಿದ್ರೆ ನಮ್ಮನ್ನ ಕಾನೂನು ಸಂಘರ್ಷಕ್ಕೆ ಒಳಗಾದವರು ಎಂದು ಪರಿಗಣಿಸಿ ಶಿಕ್ಷೆ ನೀಡುವುದಿಲ್ಲ ಎಂಬುದು ಮೂರ್ಖತನ. ಹೀಗೆಂದು ಕ್ರೈಂನಲ್ಲಿ ಭಾಗಿಯಾದ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.
ಸಕ್ಕರೆ ನಾಡು ಮಂಡ್ಯದಲ್ಲಿ ಇತ್ತೀಚೆಗೆ ಕ್ರೈಂ ಪ್ರಕರಣ ಹೆಚ್ಚುತ್ತಿವೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕೊಲೆ, ಸುಲಿಗೆಗಳ ಕೆಲ ಪ್ರಕರಣಗಳಲ್ಲಿ 18 ವರ್ಷ ತುಂಬದ ಬಾಲಕರು ಭಾಗಿಯಾಗುತ್ತಿರುವುದು ಪೊಲೀಸರಿಗೆ ತಲೆ ನೋವು ಉಂಟು ಮಾಡಿತ್ತು.
ಹಾಗಾಗಿ, ಮಂಡ್ಯ ಬಾಲ ನ್ಯಾಯ ಮಂಡಳಿ ಅಚ್ಚರಿಯ ಆದೇಶವೊಂದನ್ನು ನೀಡಿದೆ. ಮಂಡ್ಯ ಜಿಲ್ಲೆಯಲ್ಲಿ ಜರುಗಿರುವ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಲಕರನ್ನು ವಯಸ್ಕರಂತೆ ಪರಿಗಣಿಸಬೇಕೆಂದು ಆದೇಶ ನೀಡಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಬಾಲ ನ್ಯಾಯ ಮಂಡಳಿಯ ಅಧ್ಯಕ್ಷೆ ಹಾಗೂ ನ್ಯಾಯಾಧೀಶೆ ಮಾಲಾ ಅವರು ಆದೇಶ ನೀಡಿದ್ದಾರೆ.
ಜಿಲ್ಲೆಯಲ್ಲಿ ನಡೆದಿರುವ ನಾಲ್ಕು ಪ್ರಕರಣಗಳು ಅತ್ಯಂತ ಹೀನ ಹಾಗೂ ಕ್ರೂರ ಕೃತ್ಯಗಳಾಗಿವೆ. ಹೀಗಾಗಿ ಈ ಕೃತ್ಯದಲ್ಲಿ ಪಾಲ್ಗೊಂಡವರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು, ಆದರೂ ಸಹ ಅವರನ್ನು ವಯಸ್ಕರೆಂದೇ ಪರಿಗಣಿಸಬೇಕೆಂದು ಆದೇಶ ನೀಡಲಾಗಿದೆ. ಈ ಆದೇಶವನ್ನು ಜಿಲ್ಲೆಯ ಜನರು ಸೇರಿದಂತೆ ಅಧಿಕಾರಿಗಳು ಸ್ವಾಗತಿಸಿದ್ದಾರೆ.
ಓದಿ: ಮಾಲ್‌ನಲ್ಲಿ ಕೇರಳದ ನಟಿಗೆ ಲೈಂಗಿಕ ಕಿರುಕುಳ: ಸಿಸಿಟಿವಿ ದೃಶ್ಯದಲ್ಲಿ ಆರೋಪಿಗಳು ಸೆರೆ
ಪ್ರಕರಣ-01:
ಅ.11 ರಂದು ಚಂದ್ರಹಾಸ ಮತ್ತು ಹೇಮಂತ್‌ಕುಮಾರ್ ಎಂಬುವವರು ಮಂಡ್ಯದ ಗುತ್ತಲು ಬಡಾವಣೆಯಲ್ಲಿ ಹೆಸರು ಮಾಡುವ ಉದ್ದೇಶದಿಂದ ಸುಮಂತ್ ಎಂಬಾತನನ್ನು ಹಾಡ ಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು.