ಕರ್ನಾಟಕ

karnataka

ETV Bharat / jagte-raho

ಬಸವಕಲ್ಯಾಣ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದೊಡ್ಡಪ್ಪ! - ಬಸವಕಲ್ಯಾಣ ಅಪರಾಧ ಸುದ್ದಿ

ಹೆಂಡತಿಯ ತವರು ಮನೆಗೆ ಬಂದಿದ್ದ ಬೇರೊಂದು ಗ್ರಾಮದ ಸಂಜುಕುಮಾರ ಗಾಯಕವಾಡ ಅತ್ಯಾಚಾರ ಎಸಗಿದ ದುರುಳ. ಗುರುವಾರ ಸಂಜೆ 4ರ ಸುಮಾರಿಗೆ ತನ್ನ ಹೆಂಡತಿಯ ತವರು ಗ್ರಾಮಕ್ಕೆ ಬಂದಿದ್ದ. ಅದೇ ಗ್ರಾಮದಲ್ಲಿರುವ ತನ್ನ ಹೆಂಡತಿಯ ಸಹೋದರಿಯ ಮಗಳಾದ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರದಂತಹ ದುಷ್ಕೃತ್ಯ ಎಸಗಿ, ಪರಾರಿ ಆಗಿದ್ದಾನೆ.

minor raped
ಅತ್ಯಾಚಾರ

By

Published : Jul 3, 2020, 5:25 AM IST

Updated : Jul 3, 2020, 7:41 AM IST

ಬಸವಕಲ್ಯಾಣ: ಆರು ವರ್ಷದ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಆಕೆಯ ದೊಡ್ಡಪ್ಪನೇ ಅತ್ಯಾಚಾರ ಎಸಗಿರುವ ಘಟನೆ ತಾಲೂಕಿನ ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೆಂಡತಿಯ ತವರು ಮನೆಗೆ ಬಂದಿದ್ದ ಬೇರೊಂದು ಗ್ರಾಮದ ಸಂಜುಕುಮಾರ ಗಾಯಕವಾಡ ಅತ್ಯಾಚಾರ ಎಸಗಿದ ದುರುಳ. ಗುರುವಾರ ಸಂಜೆ 4ರ ಸುಮಾರಿಗೆ ತನ್ನ ಹೆಂಡತಿಯ ತವರು ಗ್ರಾಮಕ್ಕೆ ಬಂದಿದ್ದ. ಅದೇ ಗ್ರಾಮದಲ್ಲಿರುವ ತನ್ನ ಹೆಂಡತಿಯ ಸಹೋದರಿಯ ಮಗಳಾದ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರದಂತಹ ದುಷ್ಕೃತ್ಯ ಎಸಗಿ, ಪರಾರಿ ಆಗಿದ್ದಾನೆ.

ಬಾಲಕಿ ಮನೆಗೆ ಬಂದ ನಂತರ ಪಾಲಕರಿಗೆ ವಿಷಯ ತಿಳಿಸಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ತೀವ್ರ ರಕ್ತ ಸ್ರಾವದಿಂದ ಬಳಲಿದ ಬಾಲಕಿಯನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಪಿಐ ಮಹೇಶಗೌಡ ಪಾಟೀಲ್​, ಪಿಎಸ್ಐಗಳಾದ ಬಸಲಿಂಗಪ್ಪ, ಹೆಚ್​. ಜಯಶ್ರೀ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಕಾಮುಕ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Last Updated : Jul 3, 2020, 7:41 AM IST

ABOUT THE AUTHOR

...view details