ಕರ್ನಾಟಕ

karnataka

ETV Bharat / jagte-raho

13 ದಿನಗಳ ಕಾಲ 8 ಜನ ಕಾಮುಕರಿಂದ ಅಪ್ರಾಪ್ತೆ ಮೇಲೆ ಸಾಮೂಹಿಕ​ ಅತ್ಯಾಚಾರ! - gang rape latest news

ಅಪ್ರಾಪ್ತೆಯನ್ನು ಅಪಹರಿಸಿದ್ದ ಎಂಟು ಜನ ಕಾಮುಕರು ಆಕೆಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಸತತ 13 ದಿನಗಳ ಕಾಲ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್​ಗಢದ ಬಲರಾಂಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Chhattisgarh rape case
ಅತ್ಯಾಚಾರ

By

Published : Dec 7, 2020, 12:47 PM IST

ಬಲರಾಂಪುರ: ಛತ್ತೀಸ್​ಗಢದ ಬಲರಾಂಪುರ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಹೆಣ್ಣುಮಕ್ಕಳು ಮನೆಯಿಂದ ಹೊರಬರದಂತೆ ಭಯಭೀತರನ್ನಾಗಿಸಿದೆ.

ನವೆಂಬರ್ 20 ರಂದು ಕಾಣೆಯಾಗಿದ್ದ ಬಲರಾಂಪುರದ ಬಾಗಡಿ ಗ್ರಾಮದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಆಕೆ ಕಾಣೆಯಾಗುತ್ತಿದ್ದಂತೆಯೇ ಪೋಷಕರ ದೂರಿನ ಮೇಲೆ ರಾಜ್‌ಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಂಡವನ್ನು ರಚಿಸಿ ಬಾಲಕಿಯನ್ನು ಹುಡುಕಲು ಪ್ರಾರಂಭಿಸಿದರು. 13 ದಿನಗಳ ಬಳಿಕ ಆಕೆ ಪೊಲೀಸರಿಗೆ ಸಿಕ್ಕಿದ್ದು, ಬಾಲಕಿ ನೀಡಿದ ಹೇಳಿಕೆ ಕೇಳಿ ಎಲ್ಲರೂ ಬೆರಗಾಗಿದ್ದರು.

ಇದನ್ನೂ ಓದಿ: 50 ವರ್ಷದ ವ್ಯಕ್ತಿಯಿಂದ 9ರ ಬಾಲಕಿ ಮೇಲೆ ಅತ್ಯಾಚಾರ: ಶಿವಮೊಗ್ಗದಲ್ಲಿ ಕಾಮುಕ ಅರೆಸ್ಟ್​

ಅಪ್ರಾಪ್ತೆಯನ್ನು ಅಪಹರಿಸಿದ್ದ ಎಂಟು ಆರೋಪಿಗಳು ವಿವಿಧ ಸ್ಥಳಗಳಿಗೆ ಕರೆದೊಯ್ದು ಸತತ 13 ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಕೊನೆಗೆ ಸುರ್ಗುಜಾ ಜಿಲ್ಲೆಯ ಅಂಬಿಕಾಪುರದಲ್ಲಿ ಆಕೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರಲ್ಲಿ ಆರು ಮಂದಿ ಅಪ್ರಾಪ್ತ ವಯಸ್ಸಿನ ಹುಡುಗರಾಗಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details