ಕರ್ನಾಟಕ

karnataka

ETV Bharat / jagte-raho

ಎಮ್ಮೆ ಹೊಲಕ್ಕೆ ನುಗ್ಗಿತೆಂದು ಅಪ್ರಾಪ್ತನನ್ನು ಹೊಡೆದು ಕೊಂದ ಪಾಪಿಗಳು - ಅಪ್ರಾಪ್ತನ ಕೊಲೆ

ಎಮ್ಮೆ ಹೊಲಕ್ಕೆ ನುಗ್ಗಿ ಕಬ್ಬಿನ ಬೆಳೆ ನಾಶ ಮಾಡಿದೆ ಎಂಬ ಕಾರಣಕ್ಕೆ ಮೂವರು ಸೇರಿ ಅಪ್ರಾಪ್ತನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

Minor beaten to death
ಉತ್ತರ ಪ್ರದೇಶ ಕ್ರೈಂ ಸುದ್ದಿ

By

Published : Jun 22, 2020, 11:31 AM IST

ಉತ್ತರ ಪ್ರದೇಶ:ಕಬ್ಬಿನ ಬೆಳೆಯನ್ನು ಎಮ್ಮೆ ನಾಶ ಮಾಡಿತು ಎಂದು 15 ವರ್ಷದ ಬಾಲಕನನ್ನು ಮೂವರು ವ್ಯಕ್ತಿಗಳು ಥಳಿಸಿದ ಪರಿಣಾಮ ಬಾಲಕ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿ ನಡೆದಿದೆ.

ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿರುವ ಮೃತ ಬಾಲಕನ ಕುಟುಂಬದ ಸದಸ್ಯರು, ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತನ್ವೀರ್ ಖಾನ್​ ನೇತೃತ್ವದಲ್ಲಿ ಶಹಜಹಾನ್​ಪುರ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಘಟನೆ ಹಿನ್ನೆಲೆ:ಶನಿವಾರ ಸಂಜೆ ಬಾಲಕ ಕುಲ್ದೀಪ್​​​ ಯಾದವ್ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಅವನ ಎಮ್ಮೆಯು ಅಲ್ಲೇ ಸಮೀಪದಲ್ಲಿದ್ದ ಧರ್ಮೇಂದ್ರ ಸಿಂಗ್ ಹಾಗೂ ಸಾಧು ಸಿಂಗ್ ಎಂಬ ಸಹೋದರರ ಹೊಲಕ್ಕೆ ನುಗ್ಗಿದೆ. ಎಮ್ಮೆಯನ್ನು ಹಿಡಿದು ಕಟ್ಟಿ ಹಾಕಿದ ಸಹೋದರರು ಬಾಲಕನಿಗೆ ಹಿಂದಿರುಗಿಸಲು ನಿರಾಕರಿಸಿದ್ದಾರೆ. ಈ ವೇಳೆ, ಜಗಳ ನಡೆದಿದ್ದು, ಧರ್ಮೇಂದ್ರ ಸಿಂಗ್​ರ ಮಗ ಭೂಪೇಂದರ್​ ಕೂಡ ಇವರೊಂದಿಗೆ ಸೇರಿಕೊಂಡಿದ್ದಾನೆ. ಅಲ್ಲದೇ ಮೂವರು ಸೇರಿ ಕೋಲಿನಲ್ಲಿ ಕುಲ್ದೀಪ್​​​​​ ಪ್ರಜ್ಞಾಹೀನವಾಗಿ ಬೀಳುವವರೆಗೂ ಹೊಡೆದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದ ಕುಲ್ದೀಪ್​​​ನ ತಂದೆ ಮಹೇಶ್​ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಹುಡುಗ ಭಾನುವಾರ ಸಾವನ್ನಪ್ಪಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದು ತಾಯಿ ಕೂಡ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 302 (ಕೊಲೆ) ಅಡಿ ಎಫ್​ಐಆರ್ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸುತ್ತೇವೆ. ಚುನಾವಣೆಗೆ ಸಂಬಂಧಿಸಿದ ಜಗಳವೇ ಕೊಲೆಯ ಹಿಂದಿನ ಉದ್ದೇಶವಾಗಿರಬಹುದು ಎಂದು ಎಸ್​ಹೆಚ್​ಒ ಜಗ್​ ನರೇನ್​ ಪಾಂಡೆ ಹೇಳಿದ್ದಾರೆ.

ABOUT THE AUTHOR

...view details