ಕರ್ನಾಟಕ

karnataka

ETV Bharat / jagte-raho

6 ನೇ ಕ್ಲಾಸ್​ ವಿದ್ಯಾರ್ಥಿನಿಗೆ ಕಿರುಕುಳ ಆರೋಪ:  ಮಿಲಿಟರಿ ಶಾಲಾ ಶಿಕ್ಷಕನ ಬಂಧನ - ಮಿಲಿಟರಿ ಶಾಲಾ ಶಿಕ್ಷಕ

ಸೈನಿಕ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ. ಶಾಲಾ ಶಿಕ್ಷಕನ ಬಂಧನ. ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ

By

Published : Mar 25, 2019, 12:30 PM IST

ನಾಶಿಕ್​ (ಮಹಾರಾಷ್ಟ್ರ): ಇಲ್ಲಿನ ಭೋನ್ಸಲಾ ಬಾಲಕಿಯರ ಸೈನಿಕ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿರುವ ಆರೋಪದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ.

ಶಾಲಾ ಆವರಣದೊಳಗೇ ವಿದ್ಯಾರ್ಥಿನಿಗೆ ಆತ ಕಿರುಕುಳ ನೀಡಿದ್ದಾನೆ. ಅಲ್ಲದೇ ಇದೇ ಶಿಕ್ಷಕ ಈ ಹಿಂದೆಯೇ ಮತ್ತಿಬ್ಬರು ಬಾಲಕಿಯರಿಗೂ ಕಿರುಕುಳ ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಾಗಿದೆ.

ABOUT THE AUTHOR

...view details