ಕರ್ನಾಟಕ

karnataka

ETV Bharat / jagte-raho

ನನ್ನ ಕರ್ಕೊಂಡ್​ ಬಂದು ಬಕ್ರಾ ಮಾಡಿದ್ದೀರಾ...? ಬ್ಲಡ್​ ಟೆಸ್ಟ್​ ಮಾಡಿಸಿಕೊಳ್ಳಲು ಸಂಜನಾ ಕಿರಿಕ್​! - KC general hospital

ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಕರೆತಂದ ವೇಳೆ ನಟಿ ರಾಗಿಣಿ ಸಹಕಾರ ನೀಡಿದ್ರೆ, ನಟಿ ಸಂಜನಾ ರಕ್ತ ಮಾದರಿ ಪರೀಕ್ಷೆ ಮಾಡುವಾಗ ಕಿರಿಕ್ ಮಾಡಿದ್ದಾರೆ.

sandalwood drug case updates
ಬ್ಲಡ್​ ಟೆಸ್ಟ್​ ಮಾಡಿಸಿಕೊಳ್ಳಲು ಸಂಜನಾ ಕಿರಿಕ್​

By

Published : Sep 10, 2020, 4:10 PM IST

Updated : Sep 10, 2020, 11:25 PM IST

ಬೆಂಗಳೂರು: ಸ್ಯಾಂಡಲ್​​ವುಡ್​​ಗೆ ಡ್ರಗ್​​ ನಂಟು ಆರೋಪ ಸಂಬಂಧ ಅರೆಸ್ಟ್​ ಆಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ನಟಿ ಸಂಜನಾ ಗಲ್ರಾನಿಯನ್ನ ವೈದ್ಯಕೀಯ ತಪಾಸಣೆಗೆಂದು ಮಹಿಳಾ ಸಾಂತ್ವನ ಕೇಂದ್ರದಿಂದ ಕೆ.ಸಿ.ಜನರಲ್​​ ಆಸ್ಪತ್ರೆಗೆ ಇನ್ಸ್​​ಪೆಕ್ಟರ್​​ ಅಂಜುಮಾಲಾ ಕರೆದುಕೊಂಡು ಬಂದಿದ್ದರು. ಈ ವೇಳೆ ತಪಾಸಣೆಗೆ ರಾಗಿಣಿ ಸಹಕಾರ ನೀಡಿದ್ರೆ, ನಟಿ ಸಂಜನಾ ರಕ್ತ ಮಾದರಿ ಪರೀಕ್ಷೆ ಮಾಡುವಾಗ ಕಿರಿಕ್ ಮಾಡಿದ್ದಾರೆ.

ಬ್ಲಡ್​ ಟೆಸ್ಟ್​ ಮಾಡಿಸಿಕೊಳ್ಳಲು ಸಂಜನಾ ಕಿರಿಕ್​

"ನನ್ನನ್ನ ಕರೆದುಕೊಂಡು ಬಂದು ಬಕ್ರಾ ಮಾಡಿದ್ದೀರಾ.. ನಾನು ಮಾಡಿಸಿಕೊಳ್ಳಲ್ಲ, ನೋ ಅನ್ನೋದು ನನ್ನ ಹಕ್ಕು. ನಾರ್ಮಲ್ ಟೆಸ್ಟ್ ಎಂದು ನನ್ನನ್ನ ಬೇರೆ ಟೆಸ್ಟ್​​ಗೆ ಒಳಪಡಿಸ್ತಿದ್ದೀರಾ? ಇದು ತಪ್ಪಲ್ವಾ, ನಾನು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲ್ಲ" ಎಂದು ಸಂಜನಾ ತಕರಾರು ಮಾಡಿದ್ದಾರೆ. ಬಳಿಕ ಪೊಲೀಸರು, ನ್ಯಾಯಾಲಯದ ಅನುಮತಿ ಪ್ರಕಾರ ಬ್ಲಡ್​ ಟೆಸ್ಟ್​​ ಮಾಡಲಾಗ್ತಿದೆ ಎ‌ಂದು ಸಂಜನಾಗೆ ಖಡಕ್ ಎಚ್ಚರಿಕೆ ಕೊಟ್ಟು ಪರೀಕ್ಷೆ ನಡೆಸಿದ್ದಾರೆ‌.

ಸದ್ಯ ರಾಗಿಣಿಗೆ ಲೋ ಬಿಪಿ ಇರುವುದರಿಂದ ಬಿಪಿ ಚೆಕಪ್ ನಡೆಸಲಾಗಿದೆ. ಈಗ ಬಿಪಿ ನಾರ್ಮಲ್ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯಕೀಯ ತಪಾಸಣೆ ಬಳಿಕ ಮಡಿವಾಳದ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಕಚೇರಿಗೆ ಕರೆದುಕೊಂಡು ಬರಲಾಗಿದ್ದು, ಇಲ್ಲಿ ಅಂಜುಮಾಲಾ & ಟೀಂ ತನಿಖೆ ನಡೆಸುತ್ತಿದ್ದಾರೆ.

Last Updated : Sep 10, 2020, 11:25 PM IST

ABOUT THE AUTHOR

...view details