ಕರ್ನಾಟಕ

karnataka

ETV Bharat / jagte-raho

ಜಾಲತಾಣದ ಮೂಲಕ ಪರಿಚಯ, ಮದುವೆಯಾಗುವುದಾಗಿ ನಂಬಿಸಿ ಲಕ್ಷ-ಲಕ್ಷ ಪೀಕಿದ ವಿದೇಶಿ ವಂಚಕರು

ನೈಜಿರಿಯಾ ಮೂಲದ ಬ್ರೈಟ್ ಬಿನ್ ಮುದುಖಾಸ್ (25) ಬಂಧಿತ. ಶಾದಿ ಡಾಟ್ ಕಾಂನಲ್ಲಿ ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 24.50 ಲಕ್ಷ ರೂ. ವಂಚಿಸಿದ್ದ. ಈತನನ್ನು ನವದೆಹಲಿಯಲ್ಲಿ ಬಂಧಿಸಿ ಟ್ರ್ಯಾಸಿಟ್ ವಾರಂಟ್ ಮೇಲೆ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿದೆ.

marrige website froud news in bengaluru
ಮದುವೆಯಾಗುವುದಾಗಿ ನಂಬಿಸಿ ಲಕ್ಷ-ಲಕ್ಷ ಪೀಕಿದ ವಿದೇಶಿ ವಂಚಕರು

By

Published : Nov 28, 2020, 8:38 PM IST

ಬೆಂಗಳೂರು:ಮದುವೆ ಆಗಲು ವಧು-ವರ ಹುಡುಕಾಟಕ್ಕೆ ಮುನ್ನ ಸ್ವಲ್ಪ ಎಚ್ಚರಿಕೆ ವಹಿಸಿ. ಮದುವೆ ಹೆಸರಲ್ಲಿ ಲಕ್ಷ ಲಕ್ಷ ವಂಚಿಸುವ ಗ್ಯಾಂಗ್​ ನಗರದಲ್ಲಿ ಅಡಗಿದೆ. ಶಾದಿ ಕಾಟ್ ಕಾಮ್, ಮ್ಯಾಟ್ರಿಮೋನಿಯ ವೆಬ್​ಸೈಟ್ ನಲ್ಲಿ ನಕಲಿ ನೋಂದಣಿ ಮಾಡಿ ಅಮಾಯಕರ ಪರಿಚಯ ಮಾಡಿಕೊಂಡು ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು. ಬೆಂಗಳೂರಿನ ಹಲವು ಹೆಣ್ಣುಮಕ್ಕಳಿಗೆ ವಂಚನೆ ಮಾಡಿದ ಗ್ಯಾಂಗ್​ನ ಪ್ರಮುಖ ಆರೋಪಿ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದು, ಈತನ ಸಹಚರನೊಬ್ಬ ಸಿಕ್ಕಿಬಿದ್ದಿದ್ದಾನೆ.

ವೈಟ್‌ಫೀಲ್ಡ್ ಉಪ ವಿಭಾಗ ಡಿಸಿಪಿ ದೇವರಾಜ್

ನೈಜಿರಿಯಾ ಮೂಲದ ಬ್ರೈಟ್ ಬಿನ್ ಮುದುಖಾಸ್ (25) ಬಂಧಿತ. ಶಾದಿ ಡಾಟ್ ಕಾಂನಲ್ಲಿ ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 24.50 ಲಕ್ಷ ರೂ. ವಂಚಿಸಿದ್ದ. ಈತನನ್ನು ನವದೆಹಲಿಯಲ್ಲಿ ಬಂಧಿಸಿ ಟ್ರ್ಯಾಸಿಟ್ ವಾರಂಟ್ ಮೇಲೆ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿದೆ. ಈತನ ಬಂಧನದಿಂದ 10 ಪ್ರಕರಣಗಳು ಬೆಳಕಿಗೆ ಬಂದಿದ್ದು, 7.50 ಲಕ್ಷ ರೂ. ಜಪ್ತಿ ಮಾಡಿರುವುದಾಗಿ ವೈಟ್‌ಫೀಲ್ಡ್ ಉಪ ವಿಭಾಗ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

ವೈಟ್‌ಫೀಲ್ಡ್ ನಿವಾಸಿ ವಿದುಶಿ ಎಂಬಾಕೆ ಮದುವೆ ಆಗುವ ಸಲುವಾಗಿ ಶಾದಿ ಡಾಟ್ ಕಾಂನಲ್ಲಿ ಹುಡುಗನ ಹುಡುಕಾಟ ನಡೆಸುತ್ತಿದ್ದಾಗ, ಸ್ವೈನ್ ರಾಜ್ ಕಿಶೋರ್ ಎಂಬಾತ ಪರಿಚಯ ಆಗಿದ್ದ. ಇಂಗ್ಲೆಂಡ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದು, ಭಾರತಕ್ಕೆ ಹಿಂತಿರುಗಿದ ಮೇಲೆ ಮದುವೆ ಆಗುವುದಾಗಿ ನಂಬಿಸಿ ಪಿಎಚ್‌ಡಿ ಪೂರ್ಣ ಆಗಬೇಕಾದರೆ ನನಗೆ ಹಣ ಬೇಕಾಗಿದೆ. ಈಗ ಕೊಟ್ಟರೆ ಭಾರತಕ್ಕೆ ಬಂದ ಮೇಲೆ ಹಿಂತಿರುಗಿಸುವುದಾಗಿ ಹೇಳಿ ಮೊದಲು 5 ಲಕ್ಷ ರೂಪಾಯಿಯನ್ನು ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡಿದ್ದ.

ಬಂಧಿತ ಆರೋಪಿ ಬ್ರೈಟ್ ಬಿನ್ ಮುದುಖಾಸ್ ಇದಾದ ಮೇಲೆ ಸ್ಕಾಟ್‌ಲ್ಯಾಂಡ್ ಬ್ಯಾಂಕ್ ಖಾತೆಯಲ್ಲಿ ನನ್ನ ಹಣವಿದ್ದು, ಸೆಕ್ಯೂರಿಟಿ ಕಾರಣಕ್ಕೆ ಡ್ರಾ ಮಾಡಲು ಸಾಧ್ಯವಾಗುತ್ತಿಲ್ಲ. ವ್ಯಾಸಂಗಕ್ಕಾಗಿ ಮತ್ತಷ್ಟು ಹಣ ಬೇಕೆಂದು ಹಂತ ಹಂತವಾಗಿ 24.50 ಲಕ್ಷ ರೂ. ಜಮೆ ಮಾಡಿಕೊಂಡು ವಂಚನೆ ಮಾಡಿದ್ದ.

ನಂತರ ವಿದುಶಿಯವರ ಮೂಲಕ ಬೆಳ್ಳಂದೂರು ವ್ಯಾಪ್ತಿಯಲ್ಲಿ 8 ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದು ಅದರ ಎಟಿಎಂ ಕಾರ್ಡ್ ಪಾಸ್ ಬುಕ್ ಗಳನ್ನು ದೆಹಲಿಯ ಅಡ್ರಾಸ್ ಗೆ ಕೊರಿಯರ್ ಮಾಡಿಸಿಕೊಂಡು ಆ ಬ್ಯಾಂಕ್ ಖಾತೆಗಳಿಗೆ ಬೇರೆ ಬೇರೆ ಹೆಣ್ಣುಮಕ್ಕಳ ಮೂಲಕ ಹಣವನ್ನು ಹಾಕಿಸಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿವೆ. ಕಳೆದ ಹದಿನೈದು ದಿನಗಳಲ್ಲಿ ವೈಟ್ ಫೀಲ್ಡ್ ಠಾಣೆಗೆ ವಿವಾಹ ಅನ್ವೇಷಣೆ ಜಾಲತಾಣದಲ್ಲಿ ಲಕ್ಷಾಂತರ ರೂಪಾಯಿ ಮೋಸಹೋದ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದರು.

ಅಲ್ಲದೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರಿನಲ್ಲಿರುವ ಈತನ ಸಹಚರರುಗಳಾದ:

1) ಎಮಾನ್ಯುಲ್ ಎ ಒಸಮ ಹೋನ್ ಮನಡ್ಯ
2) ಜಾನ್ ಅಲೆಕ್ಸ್
3) ಡೆವೈನ್ ಮದುಕಾಸಿ
4) ಎಜುಜು ಮದುಕಾಸಿ
5) ಮರಿಯಾ ಎಮಾನ್ಯುಲ್ ಮದುಕಾಸಿ

ಇವರು ಶಾದಿ ಡಾಟ್ ಕಾಂ, ಮ್ಯಾಟ್ರಿಮೊನಿ ಡಾಟ್ ಕಾಮ್, ಮತ್ತು ವಿದೇಶದಿಂದ ಗಿಪ್ಟ್ ಗಳನ್ನು ಕಳುಹಿಸುವ ಪ್ರಕರಣಗಳಿಗೆ ಸಂಬಂದಿಸಿದಂತೆ ವ್ಯಕ್ತಿಗಳನ್ನು ಸಂಪರ್ಕಿಸಿ. ನಾನು ನಿಮ್ಮನ್ನು ಮದುವೆಯಾಗುತ್ತೇನೆಂದು ನಂಬಿಸಿ ಅವರುಗಳಿಂದ ವಿವಿಧ ಅಕೌಂಟ್ ಗಳಿಗೆ ಲಕ್ಷಾಂತರ ರೂಗಳನ್ನು ಪಡೆದು ಮೋಸ ಮಾಡಿರುತ್ತಾರೆ. ಇವರುಗಳು ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳನ್ನು ಎಕ್ಸ್ ಟ್ರಾಕ್ ಮಾಡಲಾಗಿ 38 ಭಾರತದ ವಿವಿಧ ಬ್ಯಾಂಕ್ ಗಳಲ್ಲಿ ಮತ್ತು 28 ವಿದೇಶಿ ಬ್ಯಾಂಕ್ ಗಳಲ್ಲಿ ಹಣದ ವಹಿವಾಟು ನಡೆಸಿರುವುದು ಕಂಡು ಬಂದಿದೆ ಎಂದು ಪೋಲಿಸರು ತಿಳಿಸಿದರು.

ನೊಂದ ವಿದುಶಿ, ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಗುರುಪ್ರಸಾದ್ ನೇತೃತ್ವದ ತಂಡ ದೂರುದಾರರ ಜತೆ ಸಂಭಾಷಣೆ ನಡೆಸಿದ್ದ ಮೊಬೈಲ್ ನಂಬರ್ ಆಧರಿಸಿ ದೆಹಲಿಗೆ ತೆರಳಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು.

ನ.23 ರಂದು ನವದೆಹಲಿ ಉತ್ತಮ ನಗರದಲ್ಲಿ ಆರೋಪಿಯನ್ನು ಬಂಧಿಸಿ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿ, ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಕೃತ್ಯಕ್ಕೆ ಬಳಸಿದ್ದ 4 ಲ್ಯಾಪ್‌ಟಾಪ್, 10 ಮೊಬೈಲ್ ಜಪ್ತಿ ಮಾಡಲಾಗಿದೆ. ಲ್ಯಾಪ್‌ಟಾಪ್ ಪರಿಶೀಲನೆ ವೇಳೆ ದೇಶದ ವಿವಿಧ ಬ್ಯಾಂಕ್‌ಗಳಲ್ಲಿ 38 ಖಾತೆಗಳು ಮತ್ತು ವಿದೇಶದಲ್ಲಿ 28 ಖಾತೆ ತೆರೆದಿರುವುದು ಬೆಳಕಿಗೆ ಬಂದಿವೆ. ಪಾಸ್‌ಪೋರ್ಟ್ ಮತ್ತು ವೀಸಾ ಪತ್ತೆಯಾಗಿಲ್ಲ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

ವಂಚಕ ಗ್ಯಾಂಗ್​ನ ಪ್ರಮುಖ ಆರೋಪಿ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದು, ಆತ ಅಮಾಯಕ ಹೆಣ್ಣು ಮಕ್ಕಳ ಜತೆ ಸ್ನೇಹ ಬೆಳಸಿ ಮದುವೆ ಅಥವಾ ಗ್ರೀಟಿಂಗ್​ ಕಳುಹಿಸುವ ನೆಪದಲ್ಲಿ ಬಲೆ ಬೀಸುತ್ತಿದ್ದ. ಅದಕ್ಕೆ ಬೇಕಾದ ಬ್ಯಾಂಕ್ ಖಾತೆ ಮತ್ತು ನಕಲಿ ಗಿಫ್ಟ್ ಬಾಕ್ಸ್‌ಗಳನ್ನು ಸಿದ್ಧಪಡಿಸಲು ಬೆಂಗಳೂರು, ದೆಹಲಿಯಲ್ಲಿ ಉಳಿದವರು ಅಡಗಿದ್ದಾರೆ. ಇಂಗ್ಲೆಂಡ್‌ನಿಂದ ವಂಚಕ, ಅಮಾಯಕ ಹೆಣ್ಣು ಮಕ್ಕಳಿಗೆ ಯಾಮಾರಿಸಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿದಾಗ ಅದನ್ನು ಡ್ರಾ ಮಾಡಿಕೊಳ್ಳುತ್ತಿದ್ದರು. ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ವಿವಾಹ ಅನ್ವೇಷಣೆ ಜಾಲತಾಣದಲ್ಲಿ ಪರಿಚಯ ಆಗುವ ವರ ಮತ್ತು ವಧುವಿನ ಜತೆಗೆ ಮುಖಾಮುಖಿ ಭೇಟಿಯಾಗಿ ನಂಬಿಕೆ ಬಂದ ಮೇಲೆ ವ್ಯವಹಾರ ನಡೆಸಿ. ಕೇವಲ ಮೊಬೈಲ್​ ಸಂಭಾಷಣೆ, ಚಾಟಿಂಗ್​ಗೆ ಮರುಳಾಗಬೇಡಿ ಎಂದು ವೈಟ್​ಫೀಲ್ಡ್​ ಉಪವಿಭಾಗ ಡಿಸಿಪಿ ದೇವರಾಜ್​ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:13 ವರ್ಷ ಪ್ರೀತಿಸಿದ್ದ ಪ್ರಿಯಕರ ಮದುವೆ ದಿನ ಪರಾರಿ.. ಹಸೆಮಣೆ ಏರಬೇಕಿದ್ದ ಪ್ರಿಯತಮೆಗೆ ದಿಗ್ಭ್ರಮೆ

ABOUT THE AUTHOR

...view details