ಭರತ್ಪುರ (ರಾಜಸ್ಥಾನ):ವಿಷಕಾರಿ ಮದ್ಯ ಸೇವಿಸಿ 7 ಜನರು ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾಗಿರುವ ಘಟನೆ ರಾಜಸ್ಥಾನದ ಭರತ್ಪುರ ಜಿಲ್ಲೆಯಲ್ಲಿ ನೆಡದಿದೆ.
ಭರತಪುರ್ ಜಿಲ್ಲೆಯ ರೂಪವಾಸ್ ಪ್ರದೇಶದ ಚಕ್ ಸಮ್ರಿ ಗ್ರಾಮದಲ್ಲಿ ಇಂದು ಬೆಳಗ್ಗೆ ದುರಂತ ಸಂಭವಿಸಿದೆ. ಅಸ್ವಸ್ಥರಾದವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಪೂರಿತ ಮದ್ಯ ಸೇವಿಸಿ ರಾಜಸ್ಥಾನದಲ್ಲಿ ಹಲವರು ಅಸ್ವಸ್ಥ ಇದನ್ನೂ ಓದಿ- ವಿಷಕಾರಿ ಮದ್ಯ ಸೇವಿಸಿ ಮಧ್ಯಪ್ರದೇಶದಲ್ಲಿ 11 ಮಂದಿ ಬಲಿ.. ಓರ್ವ ಅರೆಸ್ಟ್
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆ, ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಹೇಶ್ ಜೋಶಿ ಸೂಚನೆ ನೀಡಿದ್ದಾರೆ.