ರಾಯಚೂರು :ಪಾಕಿಸ್ತಾನ ಪರವಾದ ಚಿತ್ರ ಸಂದೇಶವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನ ಮಾನ್ವಿ ಪೊಲೀಸರು ಬಂಧಿಸಿದ್ದಾರೆ.
ಪಾಕ್ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್, ಆರೋಪಿ ಬಂಧನ - manvi-police arrested one accused
ತನ್ನ ಫೇಸ್‌ಬುಕ್ ಖಾತೆಯಿಂದ ಪಾಕಿಸ್ತಾನ ಪರ ಸ್ಲೋಗನ್ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ..
![ಪಾಕ್ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್, ಆರೋಪಿ ಬಂಧನ manvi-police-arrested-one-accused-post-of-pakistan-news](https://etvbharatimages.akamaized.net/etvbharat/prod-images/768-512-9089386-thumbnail-3x2-hbl.jpg)
ಪಾಕ್ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್, ಆರೋಪಿಯನ್ನು ಬಂಧಿಸಿದ ಮಾನವಿ ಪೊಲೀಸರು
ಜಿಲ್ಲೆಯ ಮಾನ್ವಿ ಪಟ್ಟಣದ ನಿವಾಸಿ ಕೆ ಎಂ ಭಾಷಾ ಬಂಧಿತ ಆರೋಪಿ. ತನ್ನ ಫೇಸ್‌ಬುಕ್ ಖಾತೆಯಿಂದ ಪಾಕಿಸ್ತಾನ ಪರ ಸ್ಲೋಗನ್ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ. ಹೀಗಾಗಿ, ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದುಕೊಂಡು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಈ ಸಂಬಂಧ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.