ಕರ್ನಾಟಕ

karnataka

ETV Bharat / jagte-raho

ಮಂಗಳೂರು: ಜೂಜು ಅಡ್ಡೆ ಮೇಲೆ ದಾಳಿ, 14 ಮಂದಿ ಸೆರೆ, 1.75 ಲಕ್ಷ ರೂ.ವಶ - 14 ಮಂದಿ ಬಂಧನ 1.75 ಲಕ್ಷ ರೂ.ವಶ

ನಗರದ ಆನೆಗುಂಡಿ 2ನೇ ತಿರುವಿನ ಕ್ರಿಸ್ಟಲ್ ಹೋಮ್ ಗೆಸ್ಟ್ ಹೌಸ್ನಲ್ಲಿ ಜೂಜು ಅಡ್ಡೆ ಮೇಲೆ ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ದಾಳಿ ಮಾಡಿದ್ದು, ಜೂಜಾಟದಲ್ಲಿ ನಿರತರಾಗಿದ್ದ 14 ಮಂದಿಯನ್ನು ಬಂಧಿಸಿದ್ದಾರೆ.

Mangalore CCB police attack on gambling, 14 arrested
ಜೂಜು ಅಡ್ಡೆ ಮೇಲೆ ಮಂಗಳೂರು ಸಿಸಿಬಿ ಪೊಲೀಸರ ದಾಳಿ, 14 ಮಂದಿ ಬಂಧನ 1.75 ಲಕ್ಷ ರೂ.ವಶ

By

Published : Jun 7, 2020, 11:47 PM IST

ಮಂಗಳೂರು:ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು 14 ಮಂದಿಯನ್ನು ಬಂಧಿಸಿ 18 ಮೊಬೈಲ್ ಸಹಿತ 1,75 ಲಕ್ಷ ರೂ‌. ವಶಪಡಿಸಿಕೊಂಡಿದ್ದಾರೆ.

ಕೂಳೂರು ಚೇತನ್‌ ಕುಮಾರ್, ಉಡುಪಿಯ ಕಲ್ಸಂಕದ ನಿಖಿಲ್, ಬರ್ಕೆಯ ಚೇತನ್, ಅಶೋಕನಗರದ ಧೀರಜ್, ದಂಬೆಲ್‌ನಸಚಿನ್, ಚೊಕ್ಕಬೆಟ್ಟುವಿನ ಸುರೇಂದ್ರ ಭಂಡಾರಿ, ಕಾನಕತ್ಲ ಮುಹಮ್ಮದ್ಅನ್ವರ್, ಬೆಂಗರೆ ಮುಹಮ್ಮದ್ ಜುಬೈರ್, ಕಾವೂರಿನ ನಾಗೇಶ್ ಶ್ರೀಯಾನ್, ಕುಳಾಯಿಭರತೇಶ್ ಶ್ರೀಯಾನ್, ಜೋಕಟ್ಟೆಯ ಮುಹಮ್ಮದ್ ಇಮ್ರಾನ್, ಕೊಣಾಜೆ ಮುಹಮ್ಮದ್ ಅನ್ವರ್, ಬಂಗ್ರ ಕೂಳೂರಿನ ಹೇಮಂತ್, ಕುಂಜತ್ತಬೈಲ್‌ನ ಸತೀಶ್ ಪೂಜಾರಿ ಬಂಧಿತ ಆರೋಪಿಗಳು.

ನಗರದ ಆನೆಗುಂಡಿ 2ನೇ ತಿರುವಿನ ಕ್ರಿಸ್ಟಲ್ ಹೋಮ್ ಗೆಸ್ಟ್ ಹೌಸ್‌ನಲ್ಲಿ ಜುಗಾರಿ ಅಡ್ಡೆಗೆ ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ದಾಳಿ ಮಾಡಿದ್ದು, ಜೂಜಾಟದಲ್ಲಿ ನಿರತರಾಗಿದ್ದ 14 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ ಆಟಕ್ಕೆ ಬಳಸಲಾಗಿರುವ 1,75,200 ರೂ., 18 ಮೊಬೈಲ್ ಫೋನ್, 52 ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ಎಸ್‌ಐ ಕಬ್ಬಾಳ್ ರಾಜ್ ಅವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ವಶಕ್ಕೆ ಪಡೆಯಲಾದ ಸ್ವತ್ತು ಹಾಗೂ ಆರೋಪಿಗಳನ್ನು ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ABOUT THE AUTHOR

...view details