ಕರ್ನಾಟಕ

karnataka

ETV Bharat / jagte-raho

ಮಂಡ್ಯ: ಶಿಕ್ಷಕನ ಮೃತದೇಹ ರಸ್ತೆ ಬದಿ ಪತ್ತೆ - ಮಂಡ್ಯ ಶಿಕ್ಷಕ ಸಾವು ಸುದ್ದಿ

ಶಿಕ್ಷಕರೊಬ್ಬರ ಮೃತದೇಹ ರಸ್ತೆ ಬದಿ ಪತ್ತೆಯಾಗಿದೆ. ಈ ಘಟನೆ ಮಂಡ್ಯದ ಕೆರೆ ಅಂಗಳದ ಕೊಬ್ಬರಿ ಮಂಡಿ ಬಳಿ ನಡೆದಿದೆ.

ಶಿಕ್ಷಕನ ಮೃತದೇಹ ರಸ್ತೆ ಬದಿ ಪತ್ತೆ
ಶಿಕ್ಷಕನ ಮೃತದೇಹ ರಸ್ತೆ ಬದಿ ಪತ್ತೆ

By

Published : Dec 24, 2020, 12:22 PM IST

ಮಂಡ್ಯ:ಕೆರೆ ಅಂಗಳದ ಕೊಬ್ಬರಿ ಮಂಡಿ ಬಳಿಶಿಕ್ಷಕರೊಬ್ಬರ ಮೃತದೇಹ ರಸ್ತೆ ಪಕ್ಕದಲ್ಲಿ ಪತ್ತೆಯಾಗಿದೆ.

ಹೆಚ್ ಮಲ್ಲಿಗೆರೆ ಗ್ರಾಮದ ಚುಂಚಯ್ಯ ಮೃತ ಶಿಕ್ಷಕ. ನಗರದ ಕಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಹಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು, ನಿನ್ನೆ ರಾತ್ರಿ ಊರಿಗೆ ತೆರಳುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಚುಂಚಯ್ಯನವರ ಮೃತದೇಹವು ನಗರದ ಕೊಬ್ಬರಿ ಮಂಡಿ ಬಳಿಯ ರಸ್ತೆ ಬದಿ ದೊರೆತಿದ್ದು, ಸ್ಕೂಟರ್ ಕೂಡ ಅಲ್ಲೇ ಕಂಡುಬಂದಿದೆ. ಇವರಿಗೆ ಕಡಿಮೆ ರಕ್ತದೊತ್ತಡ ಸಮಸ್ಯೆ ಇದ್ದು, ಅದರಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಸದ್ಯ ವಿಚಾರ ತಿಳಿದ ಮಂಡ್ಯ ಸೆಂಟ್ರಲ್ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ABOUT THE AUTHOR

...view details