ಕರ್ನಾಟಕ

karnataka

ETV Bharat / jagte-raho

ಪ್ರೇಯಸಿಯನ್ನು ಕೊಂದು ಫ್ಲಾಟ್​ನ ಗೋಡೆಯಲ್ಲಿ ಶವ ಅಡಗಿಸಿಟ್ಟಿದ್ದ ಭೂಪ: ಮುಂದೇನಾಯ್ತು?​ - maharashtra crime news

ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನು ಪ್ರಿಯಕರನೇ ಒಂದು ವರ್ಷದ ಹಿಂದೆ ಕೊಲೆ ಮಾಡಿ ಆಕೆಯ ಮೃತದೇಹವನ್ನು ಫ್ಲಾಟ್​ನ ಗೋಡೆಯಲ್ಲಿ ಅಡಗಿಸಿಟ್ಟಿದ್ದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

Man kills girlfriend, hides her body in walls of flat
ಪ್ರೇಯಸಿಯನ್ನು ಕೊಂದು ಫ್ಲಾಟ್​ನ ಗೋಡೆಯಲ್ಲಿ ಶವ ಅಡಗಿಸಿಟ್ಟಿದ್ದ ಭೂಪ

By

Published : Jan 16, 2021, 12:44 PM IST

ಪಾಲ್ಘರ್​ (ಮಹಾರಾಷ್ಟ್ರ):ತನ್ನ ಪ್ರಿಯತಮೆಯನ್ನು ಕೊಲೆ ಮಾಡಿ, ಆಕೆಯ ಮೃತದೇಹವನ್ನು ಫ್ಲಾಟ್​ನ ಗೋಡೆಯಲ್ಲಿ ಅಡಗಿಸಿಟ್ಟಿದ್ದ ವ್ಯಕ್ತಿಯನ್ನು ಒಂದು ವರ್ಷದ ಬಳಿಕ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಐದು ವರ್ಷಗಳಿಂದ ಪ್ರೀತಿಸುತ್ತಿದ್ದವನಿಗೆ ಯುವತಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ನಿರಾಕರಿಸಿದ ಆತನು 2019ರ ಅಕ್ಟೋಬರ್​​ನಲ್ಲಿ ಪ್ರೇಯಸಿಯನ್ನು ಕೊಂದು, ಯಾರಿಗೂ ತಿಳಿಯದಂತೆ ಶವವನ್ನು ತಾನು ವಾಸಿಸುತ್ತಿದ್ದ ಫ್ಲಾಟ್​ನ ಗೋಡೆಯಲ್ಲಿ ಅಡಗಿಸಿಟ್ಟಿದ್ದನು.

ಇದನ್ನೂ ಓದಿ:ಸಂಕ್ರಾಂತಿ ದಿನವೇ ಪ್ರಾಣಕ್ಕೆ ಕುತ್ತು: ಕೈಟ್​ ಹಾರಿಸುವಾಗ ಕಟ್ಟಡದ ಮೇಲಿಂದ ಬಿದ್ದು ಟಿಆರ್​ಎಸ್ ಮುಖಂಡ ಸಾವು!

ಮೃತ ಯುವತಿಯ ಪೋಷಕರು ಈ ಬಗ್ಗೆ ಕೇಳಿದರೆ, ಅವಳು ಗುಜರಾತ್​ಗೆ ಹೋಗುತ್ತೇನೆಂದು ಹೇಳಿದವಳು ಮರಳಿ ಬಂದಿಲ್ಲ ಎಂದು ಹೇಳಿ ಆರೋಪಿ ತಪ್ಪಿಸಿಕೊಂಡಿದ್ದಾನೆ. ಆದರೆ ಹಲವಾರು ತಿಂಗಳುಗಳು ಕಳೆದರೂ ಮಗಳು ಹಿಂದಿರುಗಿ ಬಾರದ್ದನ್ನು ಕಂಡು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದಾಗ ಪ್ರಿಯತಮನ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details