ಕರ್ನಾಟಕ

karnataka

ETV Bharat / jagte-raho

2 ವರ್ಷದ ಮಗುವಿನೊಂದಿಗೆ ಪತ್ನಿಯನ್ನ ಮನೆಯಿಂದ ಹೊರಹಾಕಿದ ಪತಿ! - ರಾಮಮೂರ್ತಿ ನಗರ ಪೊಲೀಸ್ ಠಾಣೆ

ಹೈದರಾಬಾದ್ ಮೂಲದ ಟೆಕ್ಕಿವೋರ್ವ ಎರಡು ವರ್ಷದ ಮಗುವಿನೊಂದಿಗೆ ತನ್ನ ಹೆಂಡತಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಕಿರುಕುಳ ಆರೋಪದಡಿ ಮಹಿಳೆಯ ಪತಿ, ಅತ್ತೆ, ಮಾವನ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Bengaluru crime news
ಪತ್ನಿಯನ್ನ ಮನೆಯಿಂದ ಹೊರಹಾಕಿದ ಪತಿ

By

Published : Oct 11, 2020, 10:03 AM IST

ಬೆಂಗಳೂರು: ಹೈದರಾಬಾದ್ ಮೂಲದ ಟೆಕ್ಕಿವೋರ್ವ ತನ್ನ ಪತ್ನಿಗೆ ಕಿರುಕುಳ ನೀಡಿ, ಎರಡು ವರ್ಷದ ಮಗುವಿನೊಂದಿಗೆ ಆಕೆಯನ್ನು ಮನೆಯಿಂದ ಹೊರಹಾಕಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಪತಿ ಮತ್ತು ಆತನ ಕುಟುಂಬದವರು ಕಿರುಕುಳ ನೀಡಿದ್ದಾರೆಂದು ಆರೋಪಿಸಿರುವ ಮಹಿಳೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಂದಿನಿ (ಹೆಸರು ಬದಲಾಯಿಸಲಾಗಿದೆ) ಕೆಲ ವರ್ಷಗಳ ಹಿಂದೆ ಹರಿಪ್ರಸಾದ್ ತೋಟಾ ಎಂಬವರ ಜೊತೆ ವಿವಾಹವಾಗಿದ್ದರು. ಕೆಲವು ತಿಂಗಳುಗಳ ಕಾಲ ಅಮೆರಿಕದಲ್ಲಿದ್ದ ಈ ದಂಪತಿ, ಬಳಿಕ ಅಲ್ಲಿಂದ ಬೆಂಗಳೂರಿಗೆ ಬಂದು ವಾಸವಿದ್ದರು. ಅತ್ತೆ, ಮಾವ ಹಾಗೂ ಗಂಡ ವರದಕ್ಷಿಣೆ ತರುವಂತೆ ಕಿರುಕುಳ‌ ನೀಡುತ್ತಿದ್ದರು. ಅಲ್ಲದೇ ಊಟ ಕೂಡ ಕೊಡದೇ ಮಗುವಿನ ಜೊತೆಗೆ ಮನೆಯಿಂದ ಹೊರಹಾಕಿದ್ದು, ಕಾರಿಡಾರ್​ನಲ್ಲೇ ರಾತ್ರಿ ಕಳೆದಿರುವುದಾಗಿ ನಂದಿನಿ ಅಳಲು ತೋಡಿಕೊಂಡಿದ್ದಾರೆ.

ಘಟನೆ ಸಂಬಂಧ ಮೂವರ ವಿರುದ್ಧ ರಾಮಮೂರ್ತಿ ನಗರ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಮೂವರೂ ತಲೆಮರೆಸಿಕೊಂಡಿದ್ದಾರೆ.

ABOUT THE AUTHOR

...view details