ಕರ್ನಾಟಕ

karnataka

ETV Bharat / jagte-raho

ಬಿಎಸ್​ಪಿ ಟಿಕೆಟ್​ ನೀಡಿಲ್ಲ ಎಂದು ​ಆರೋಪಿಸಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ!

ಉತ್ತರ ಪ್ರದೇಶದ ಘಾಜಿಪುರ್​ನ ವ್ಯಾಪಾರಿಯೊಬ್ಬರು 2022ರ ವಿಧಾನಸಭಾ ಚುನಾಚಣೆಯಲ್ಲಿ ಸ್ಪರ್ಧಿಸಲು ಬಿಎಸ್​ಪಿ ಟಿಕೆಟ್​ ನೀಡಿಲ್ಲ ಎಂದು ಡೆತ್​ನೋಟ್ ಬರೆದಿಟ್ಟು ಸೂಸೈಡ್​ ಮಾಡಿಕೊಂಡಿದ್ದಾರೆ.

suicide
ಬಿಎಸ್​ಪಿ ಟಿಕೆಟ್​ ನೀಡಿಲ್ಲ ಎಂದು ​ಆರೋಪಿಸಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

By

Published : Oct 30, 2020, 11:01 AM IST

ಘಾಜಿಪುರ್​ (ಉತ್ತರ ಪ್ರದೇಶ): ವ್ಯಾಪಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಡೆತ್​ನೋಟ್​ನಲ್ಲಿ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾಚಣೆಯಲ್ಲಿ ಸ್ಪರ್ಧಿಸಲು ನನಗೆ ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಟಿಕೆಟ್​ ನೀಡಿಲ್ಲ. ಹೀಗಾಗಿ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವೆ ಎಂದು ದೂರಿದ್ದಾರೆ.

ಘಾಜಿಪುರ್​ ನಿವಾಸಿ ಮುನ್ನು ಪ್ರಸಾದ್​ ಆತ್ಮಹತ್ಯೆಗೆ ಶರಣಾದ ವ್ಯಾಪಾರಿ. "ಎರಡು ಕೋಟಿ ಕೊಟ್ಟರೆ ಚುನಾಚಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದರು. ಆದರೆ ಅಷ್ಟೊಂದು ಹಣ ತನ್ನ ಬಳಿ ಇಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ" ಎಂದು ಮುನ್ನು ಪ್ರಸಾದ್ ಬರೆದ ಡೆತ್​ನೋಟ್​ನಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಿನಾಥ್ ಸೋನಿ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಡೆತ್​ನೋಟ್​ನ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ಮುಗಿಯುವವರೆಗೂ ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮೃತ ವ್ಯಾಪಾರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿರಲಿಲ್ಲ. ಪಕ್ಷದ ಹೆಸರನ್ನು ಕೆಡಿಸುವ ದುರುದ್ದೇಶದಿಂದ ಡೆತ್​ನೋಟ್ ಬರೆಯಲಾಗಿದೆ ಎಂದು ಬಿಎಸ್​ಪಿಯ ಜಿಲ್ಲಾ ಸಂಯೋಜಕ ಗುಡ್ಡು ರಾಮ್ ಆರೋಪಿಸಿದ್ದಾರೆ. ಆದರೆ ಮುನ್ನು ಪ್ರಸಾದ್ ಬಿಎಸ್​ಪಿ ಪಕ್ಷದ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ಮಾಯಾವತಿ ಅವರು ಚುನಾವಣೆಯಲ್ಲಿ ಟಿಕೆಟ್ ನೀಡುತ್ತಾರೆ ಎಂದು ಮುನ್ನು ಯಾವಾಗಲೂ ಹೇಳಿಕೊಂಡು ತಿರುಗುತ್ತಿದ್ದ ಎಂದು ನೆರೆಹೊರೆಯವರು ಹೇಳುತ್ತಿದ್ದಾರೆ.

ABOUT THE AUTHOR

...view details