ಕರ್ನಾಟಕ

karnataka

ETV Bharat / jagte-raho

ದುಶ್ಚಟಕ್ಕಾಗಿ ರೈಲು ನಿಲ್ದಾಣಗಳಲ್ಲಿ ಕಳ್ಳತನ ‌: ಚಿನ್ನಾಭರಣ ಸಮೇತ ಆರೋಪಿ ಬಂಧನ - ಸೈಯ್ಯದ್ ಸಾಧಿಕ್ ಸಲೀಂ ಬಂಧಿತ ಆರೋಪಿ

ಕಳ್ಳತನ ಪ್ರಕರಣ ದಾಖಲಿಸಿಕೊಂಡ ಸಂಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರು, ಗ್ರಾಮಾಂತರ ರೈಲ್ವೆ ನಿಲ್ದಾಣಗಳ ಬಳಿ ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ..

Man arrested for robbing railway station Bangalore
ದುಶ್ಚಟಕ್ಕಾಗಿ ರೈಲು ನಿಲ್ದಾಣಗಳಲ್ಲಿ ಕಳ್ಳತನ‌: ಚಿನ್ನಾಭರಣ ಸಮೇತ ಆರೋಪಿ ಬಂಧನ

By

Published : Sep 15, 2020, 3:18 PM IST

ಬೆಂಗಳೂರು :ದುಶ್ವಟ ತೀರಿಸಿಕೊಳ್ಳಲು ರೈಲ್ವೆ ನಿಲ್ದಾಣಗಳಲ್ಲಿ ಸರಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 6.41 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳುವಲ್ಲಿ ಸಂಜಯ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ದುಶ್ಚಟಕ್ಕಾಗಿ ರೈಲು ನಿಲ್ದಾಣಗಳಲ್ಲಿ ಕಳ್ಳತನ.. ಚಿನ್ನಾಭರಣ ಸಮೇತ ಆರೋಪಿ ಬಂಧನ

ಸೈಯ್ಯದ್ ಸಾಧಿಕ್ ಸಲೀಂ ಬಂಧಿತ ಆರೋಪಿ. ಈತ ಭದ್ರಾವತಿಯ ಸಿದ್ದಾಪುರ‌ದ ಮೂಲದ ಆರೋಪಿ. ನಾಗಶೆಟ್ಟಿಹಳ್ಳಿ ದೇವಸ್ಥಾನದ ಬಳಿ ಬೈಕ್‌ಗೆ ಬೀಗ ಹಾಕಿ ನಿಲ್ಲಿಸಿದಾಗ ಹ್ಯಾಂಡಲ್‌ ಲಾಕ್‌ ಮುರಿದು ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದ.

ಕಳ್ಳತನ ಪ್ರಕರಣ ದಾಖಲಿಸಿಕೊಂಡ ಸಂಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರು, ಗ್ರಾಮಾಂತರ ರೈಲ್ವೆ ನಿಲ್ದಾಣಗಳ ಬಳಿ ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ. ಅಕ್ರಮವಾಗಿ‌ ದುಡಿದ‌ ಹಣ ದುಶ್ವಟಗಳಿಗೆ ಬಳಸಿಕೊಳ್ಳುತ್ತಿದ್ದ‌‌.

ಸಂಜಯನಗರ, ಬೆಂಗಳೂರು ರೈಲ್ವೆ ನಿಲ್ದಾಣ, ಬಾಣಸವಾಡಿ ಹಾಗೂ ಭದ್ರಾವತಿ ನ್ಯೂಟನ್ ಪೊಲೀಸ್ ಠಾಣೆಗಳಲ್ಲಿ‌ ದಾಖಲಾಗಿದ್ದ ರಾಬರಿ, ಸರಗಳ್ಳತನ ಸೇರಿ ಎಂಟು ಪ್ರಕರಣ ಪತ್ತೆಯಾಗಿವೆ. ಸದ್ಯ‌ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ‌.

ABOUT THE AUTHOR

...view details