ಬೆಂಗಳೂರು:ಬೌನ್ಸ್ ಬೈಕ್ ನಲ್ಲಿ ಬಂದ ಸರಗಳ್ಳರಿಬ್ಬರು ಮಹಿಳೆಯ ತಲೆಗೆ ಹೊಡೆದು ಚಿನ್ನದ ಸರ ಕಸಿದಿರುವ ಘಟನೆ ಕೆ.ಆರ್ ಪುರಂದಲ್ಲಿ ನಡೆದಿದೆ. ನಿನ್ನೆಯಷ್ಟೇ ಇಂಥದ್ದೇ ಒಂದು ಪ್ರಕರಣ ನಡೆದಿದ್ದು ಬೆಳಕಿಗೆ ಬಂದಿತ್ತು. ಅದು ಇನ್ನೂ ಚರ್ಚೆಯಲ್ಲಿರುವಾಗಲೇ ದುಷ್ಕರ್ಮಿಗಳು ಅಂಥದ್ದೇ ಕೃತ್ಯ ಎಸಗಿದ್ದಾರೆ.
ಬೌನ್ಸ್ ಬೈಕ್ನಲ್ಲಿ ಬಂದು ಸರಗಳ್ಳತನ... ಬೆಂಗಳೂರಲ್ಲಿ ಮತ್ತೊಂದು ಪ್ರಕರಣ: ಸಿಸಿ ಕ್ಯಾಮೆರಾದಲ್ಲಿ ಸೆರೆ - ಲೀಲಾವತಿ ಹೆಬ್ಬಾರ್ ತನ್ನ ಮೊಮ್ಮಕ್ಕಳ ಜೊತೆ ವಾಕಿಂಗ್
ಬೌನ್ಸ್ ಬೈಕ್ ನಲ್ಲಿ ಬಂದ ಸರಗಳ್ಳರಿಬ್ಬರು ಮಹಿಳೆಯ ತಲೆಗೆ ಹೊಡೆದು ಚಿನ್ನದ ಸರ ಕಸಿದಿರುವ ಘಟನೆ ಕೆ.ಆರ್ ಪುರಂದಲ್ಲಿ ನಡೆದಿದೆ.
ನಿನ್ನೆಯಷ್ಟೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬೌನ್ಸ್ ಬೈಕ್ ಬಳಕೆ ಮಾಡಿ ಸರಗಳ್ಳತನ ಮಾಡುತ್ತಿರುವ ಆರೋಪಿಗಳು ಮೂರ್ಖರು ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಕೆ.ಆರ್ ಪುರಂ, ಬೈಯಪ್ಪನಹಳ್ಳಿ, ಪೂರ್ವ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೌನ್ಸ್ ಗಾಡಿ ಬಳಕೆ ಮಾಡಿ ಇಬ್ಬರು ಕಳ್ಳರು ಸರಗಳ್ಳತನ ಮಾಡುತ್ತಿರುವ ವಿಚಾರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಇಬ್ಬರು ಖದೀಮರು ಬೌನ್ಸ್ ಬೈಕಲ್ಲಿ ಬಂದು ಒಂಟಿಯಾಗಿ ಓಡಾಡುವ ಮಹಿಳೆಯರನ್ನ ಟಾರ್ಗೆಟ್ ಮಾಡಿ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಕ್ಷಣಾರ್ಧದಲ್ಲಿ ಚಿನ್ನಾಭರಣ ದೋಚಿದ್ದಾರೆ. ಲೀಲಾವತಿ ಹೆಬ್ಬಾರ್ ತನ್ನ ಮೊಮ್ಮಕ್ಕಳ ಜೊತೆ ವಾಕಿಂಗ್ ತೆರಳುತ್ತಿದ್ದ ವೇಳೆ ಬೌನ್ಸ್ ಬೈಕಲ್ಲಿ ಬಂದ ಆರೋಪಿಗಳು ಮಹಿಳೆ ತಲೆಗೆ ಹೊಡೆದು ಸರ ಎಗರಿಸಿ ಪರಾರಿಯಾಗಿದ್ದಾರೆ. ಸದ್ಯ ಕೆ.ಆರ್ ಪುರಂ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.