ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಅಂಪೈರ್ ಬಿ ಕೆ ರವಿಯವರನ್ನು ವಿಚಾರಣೆ ನಡೆಸಿದ್ದಾರೆ. ಕೆಪಿಎಲ್ ಪಂದ್ಯದಲ್ಲಿ ಬಿ ಕೆ ರವಿ ಅಂಪೈರ್ ಆಗಿದ್ದರು. ಅದೇ ಮ್ಯಾಚ್ನಲ್ಲಿ ಅವರ ಮಗ ಶರತ್ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿದ್ದರು. ರವಿಯವರು ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ವಿಚಾರಣೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ.. ಸಿಸಿಬಿಯಿಂದ ಅಂಪೈರ್ ಬಿ ಕೆ ರವಿ ವಿಚಾರಣೆ - ಅಂಪೈರ್ ಬಿ.ಕೆ. ರವಿ ಮಗ ಶರತ್
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಅಂಪೈರ್ ಬಿ ಕೆ ರವಿ ಅವರನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.
ತಂದೆ ವಿಚಾರಣೆ ಬೆನ್ನಲ್ಲೇ ಮಗನಿಗೂ ಸಹ ಸಿಸಿಬಿಯ ಭಯ ಉಂಟಾಗಿದ್ದು, ತಂದೆಯ ಹೇಳಿಕೆಯ ಮೇರೆಗೆ ಮಗನಿಗೂ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ನಿಯಮದ ಪ್ರಕಾರ ಕುಟುಂಬಸ್ಥರು ಆಡುವ ಪಂದ್ಯದಲ್ಲಿ ಅಂಪೈರಿಂಗ್ ಮಾಡುವಂತಿಲ್ಲ. ಆದರೆ, ಶರತ್ ಆಡಿದ ಮ್ಯಾಚ್ನಲ್ಲಿ ಅವರ ತಂದೆಯೇ ಅಂಪೈರ್ ಆಗಿದ್ದರು. ಈ ಹಿನ್ನೆಲೆ ಮಗ ಆಡಿದ ಪಂದ್ಯದಲ್ಲಿ ಮ್ಯಾಚ್ ಫಿಕ್ಸ್ ಆಗಿರುವ ಸುಳಿವು ಹಿನ್ನೆಲೆ ಪಂದ್ಯದ ಸಂಪೂರ್ಣ ಫೂಟೇಜ್‌ನ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಇತರೆ ಆಟಗಾರರು ಹಾಗೂ ಬುಕ್ಕಿಗಳು ನೀಡಿದ ಮಾಹಿತಿಯ ಮೇರೆಗೆ ರವಿಯವರನ್ನು ವಿಚಾರಣೆಗೊಳಪಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದು ಕಂಡುಬಂದರೆ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.