ಕರ್ನಾಟಕ

karnataka

ETV Bharat / jagte-raho

ರಾಯಚೂರು ನ್ಯಾಯಾಧೀಶರ ಮನೆಗೆ ಕನ್ನ ಹಾಕಿದ ಖದೀಮರು - raichuru crime news

ಮನೆಯಲ್ಲಿ ಯಾರೂ ಇಲ್ಲದ್ದನ್ನು ಅರಿತು ರಾಯಚೂರು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಕನ್ನ ಹಾಕಿದ ಖದೀಮರು. ಪಶ್ಚಿಮ ಠಾಣೆಯಲ್ಲಿ ದೂರು ದಾಖಲು.

ರಾಯಚೂರು ನ್ಯಾಯಾಧೀಶರ ಮನೆಗೆ ಕನ್ನ ಹಾಕಿದ ಖದೀಮರು

By

Published : Oct 4, 2019, 5:33 AM IST

ರಾಯಚೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ನ್ಯಾಯಾಧೀಶರ ಮನೆಗೆ ಖದೀಮರು ಕನ್ನ ಹಾಕಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ನಗರದ ನವಾಜ್ ಕಾಲೋನಿಯಲ್ಲಿರುವ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಮಹ್ಮಮದ್ ಖಾನ್ ಪಠಾಣ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಅ.1ರಂದು ಕಲಬುರಗಿ ಬಂದೇ ನವಾಜ್ ದರ್ಗಾಕ್ಕೆ ಕುಟುಂಬ ಪರಿವಾರದೊಂದಿಗೆ ದರ್ಶನಕ್ಕಾಗಿ ನ್ಯಾಯಾಧೀಶರು ತೆರಳಿದ್ದರು. ಬಳಿಕ ಅ.2ರಂದು ವಾಪಸ್ ಮನೆ ಬಂದು ನೋಡಿದಾಗ, ಮನೆಯ ಹಿಂಬಾಗಿಲು ಕೊಂಡಿ ಮುರಿದು ಕೃತ್ಯ ಎಸಗಿದ್ದಾರೆ.

ಬೆಡ್ ರೂಮ್​​ನಲ್ಲಿನ ಸೂಟುಕೇಸ್, ಮಂಚಕ್ಕೆ ಅಳವಡಿಸಿದ ಡ್ರಾ ಹಾಗೂ ಅಲ್ಮಾರವನ್ನು ಮುರಿದು ಶೋಧ ಮಾಡಿದ್ದಾರೆ. ಆದ್ರೆ ಮನೆಯೊಳಗೆ ಪರಿಶೀಲಿಸಿದಾಗ ಯಾವುದೇ ಸಾಮಾನುಗಳು ಕಳ್ಳತನವಾಗಿಲ್ಲ ಎಂದು ತಿಳಿದು ಬಂದಿದೆ.

ಈ ಕುರಿತು ನ್ಯಾಯಾಧೀಶರ ಪುತ್ರ ಮೊಸಿನ್ ಖಾನ್ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ABOUT THE AUTHOR

...view details