ಕರ್ನಾಟಕ

karnataka

ETV Bharat / jagte-raho

ಕಾರಿನಲ್ಲಿ ಪತ್ರಕರ್ತ ಶವವಾಗಿ ಪತ್ತೆ : ಕತ್ತು ಹಿಸುಕಿ ಕೊಲೆಗೈದ ಶಂಕೆ - UP crime latest news

ಯುಪಿಯ ಕಾನ್ಪುರದಲ್ಲಿ ಪತ್ರಕರ್ತರೊಬ್ಬರು ಶವವಾಗಿ ಪತ್ತೆಯಾಗಿದ್ದು, ಪ್ರಕರಣದ ತನಿಖೆಗಾಗಿ ಮೂರು ಪೊಲೀಸ್​​ ತಂಡಗಳನ್ನು ರಚಿಸಲಾಗಿದೆ..

Barra police station area of Kanpur
ಕಾರಿನಲ್ಲಿ ಪತ್ರಕರ್ತ ಶವವಾಗಿ ಪತ್ತೆ

By

Published : Jan 3, 2021, 11:23 AM IST

ಕಾನ್ಪುರ(ಉತ್ತರಪ್ರದೇಶ) :ಇಲ್ಲಿನ ಬಾರ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲುವೆಯ ಬಳಿ ಕಾರಿನ ಹಿಂಬದಿಯ ಸೀಟಿನಲ್ಲಿ ಪತ್ರಕರ್ತರೊಬ್ಬರ ಮೃತದೇಹ ಪತ್ತೆಯಾಗಿದೆ. ಜನವರಿ 1ರಿಂದ ಪತ್ರಕರ್ತ ಅಶು ಯಾದವ್​​ ನಾಪತ್ತೆಯಾಗಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಸ್ಥಳಕ್ಕೆ ವಿಧಿವಿಜ್ಞಾನ ತಂಡ ಆಗಮಸಿದ್ದು, ಕತ್ತು ಹಿಸುಕಿ ಹತ್ಯೆಗೈಯ್ಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಕಾನ್ಪುರ ಎಸ್‌ಎಸ್‌ಪಿ ದೀಪಕ್ ಕಪೂರ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳೆ ಕಾಯಲು ಹೋಗಿದ್ದ ರೈತನನ್ನ ಕಾಲಿನಲ್ಲಿ ತುಳಿದು ಕೊಂದ ಆನೆ

ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಕ್ಕಾಗಿ ಹುಡುಕಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ದೀಪಕ್ ಕಪೂರ್ ಹೇಳಿದ್ದಾರೆ.

ABOUT THE AUTHOR

...view details