ಪಾಟ್ನಾ (ಬಿಹಾರ): ಜನತಾದಳ (ಸಂಯುಕ್ತ) ಪಕ್ಷದ ವಿದ್ಯಾರ್ಥಿ ಮುಖಂಡ ಅಲೋಕ್ ತೇಜಸ್ವಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ಪಾಟ್ನಾದ ಬಕ್ತಿಯಾರ್ಪುರದಲ್ಲಿ ನಡೆದಿದೆ.
ನಿನ್ನೆ ರಾತ್ರಿ 11.30ರ ವೇಳೆಗೆ ಅಲೋಕ್ ಮನೆಯ ಎದುರೇ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ತಕ್ಷಣವೇ ಅವರನ್ನು ಪಾಟ್ನಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಅಲೋಕ್ ಮೃತಪಟ್ಟಿದ್ದಾರೆ.