ಕರ್ನಾಟಕ

karnataka

ETV Bharat / jagte-raho

ಬೈಕ್ ವ್ಹೀಲಿಂಗ್ ಮಾಡುತ್ತಲೇ ಜೆಸಿಬಿಗೆ ಡಿಕ್ಕಿ: ಇಬ್ಬರು ಯುವಕರ ಸಾವು - ದೊಡ್ಡಬಳ್ಳಾಪುರದಿಂದ ಬೆಂಗಳೂರು

ದೊಡ್ಡಬಳ್ಳಾಪುರದಿಂದ ಬೆಂಗಳೂರು ಕಡೆ ಬೈಕ್​ನಲ್ಲಿ ಹೋಗುತ್ತಿದ್ದ ಯುವಕರು ಜೆಸಿಬಿಯನ್ನ ವ್ಹೀಲಿಂಗ್ ಮಾಡುತ್ತಲೇ ಓವರ್ ಟೇಕ್ ಮಾಡಲು ಯತ್ನಿಸಿ ಅಪಘಾತವಾಗಿ ಸಾವನ್ನಪ್ಪಿದ್ದಾರೆ.

jcb-collides-with-bike-wheeling-killing-two-youths
ಬೈಕ್ ವೀಲಿಂಗ್ ಮಾಡುತ್ತಲೇ ಜೆಸಿಬಿಗೆ ಡಿಕ್ಕಿ, ಇಬ್ಬರು ಯುವಕರ ಸಾವು..

By

Published : Jan 5, 2021, 7:45 PM IST

ದೊಡ್ಡಬಳ್ಳಾಪುರ: ಬೈಕ್ ವ್ಹೀಲಿಂಗ್​ ಮಾಡುತ್ತಾ ಜೆಸಿಬಿಗೆ ಡಿಕ್ಕಿ ಹೊಡೆದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸಹುಡ್ಯ ಗೇಟ್ ಬಳಿಯ ಕಂಟ್ರಿ ಕ್ಲಬ್ ಮುಂಭಾಗದಲ್ಲಿ ಘಟನೆ ನಡಿದಿದೆ.

ಓದಿ: ಉಡದ ಮಾಂಸ ಸಾಗಾಟ: ಆರೋಪಿ ಅರೆಸ್ಟ್​

ದೊಡ್ಡಬಳ್ಳಾಪುರದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಯುವಕರು ಜೆಸಿಬಿಯನ್ನ ಓವರ್ ಟೇಕ್ ಮಾಡುವ ಯತ್ನದಲ್ಲಿದ್ದರು. ಬೈಕ್ ವ್ಹೀಲಿಂಗ್​​ ಮಾಡುತ್ತಲೇ ಓವರ್ ಟೇಕ್ ಮಾಡಲು ಹೋದ ಯುವಕರು ಜೆಸಿಬಿಯ ಹಿಂಭಾಗಕ್ಕೆ ಡಿಕ್ಕಿ ಹೊಡಿದಿದ್ದಾರೆ.

ಬೈಕ್ ವೀಲಿಂಗ್ ಮಾಡುತ್ತಲೇ ಜೆಸಿಬಿಗೆ ಡಿಕ್ಕಿ, ಇಬ್ಬರು ಯುವಕರ ಸಾವು..

ಅಪಘಾತದ ತೀವ್ರತೆಗೆ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯುವಕರು ಬೆಂಗಳೂರಿನ ಮತ್ತಿಕೇರಿಯ ನಿವಾಸಿಗಳಾಗಿದ್ದು, ಶವಗಳನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details