ಕರ್ನಾಟಕ

karnataka

ETV Bharat / jagte-raho

ಐಪಿಎಲ್​ ಬೆಟ್ಟಿಂಗ್​ ದಂಧೆ: ಬರೋಬ್ಬರಿ 4.19 ಕೋಟಿ ರೂ ವಶಕ್ಕೆ ಪಡೆದ ಪೊಲೀಸರು!

13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ದೊಡ್ಡ ಮಟ್ಟದ ಬೆಟ್ಟಿಂಗ್ ನಡೆಯುತ್ತಿರುವ ಮಾಹಿತಿ ಹೊರಬೀಳುತ್ತಿದ್ದು, ಸದ್ಯ ಜೈಪುರದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬರೋಬ್ಬರಿ 4.19 ಕೋಟಿ ರೂ. ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

IPL betting racket
IPL betting racket

By

Published : Oct 22, 2020, 5:28 PM IST

ಜೈಪುರ್​:ದುಬೈನಲ್ಲಿ ನಡೆಯುತ್ತಿರುವ ಇಂಡಿಯನ್​ ಪ್ರೀಮಿಯರ್ ಲೀಗ್​ನ ಬೆಟ್ಟಿಂಗ್​ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಜೈಪುರ್​ ಪೊಲೀಸರು ಬರೋಬ್ಬರಿ 4.19 ಕೋಟಿ ರೂ. ವಶಕ್ಕೆ ಪಡೆದುಕೊಂಡಿದ್ದಾರೆ.

ದುಬೈನಿಂದಲೇ ಈ ದಂಧೆ ನಡೆಸಲಾಗುತ್ತಿತ್ತು. ವಿವಿಧ ವ್ಯಾಟ್ಸನ್​ ಗ್ರೂಪ್​ ಬಳಕೆ ಮಾಡಿಕೊಂಡು ಆನ್​ಲೈನ್​ ಮೂಲಕ ಬೆಟ್ಟಿಂಗ್​​ನಲ್ಲಿ ಭಾಗಿಯಾಗುವಂತೆ ಹೇಳಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದೀಗ ಜೈಪುರ್​ ಪೊಲೀಸರು ನಾಲ್ವರು ಆರೋಪಿಗಳ ಬಂಧನ ಮಾಡಿದ್ದಾರೆ.

ಈ ದಂಧೆಯಲ್ಲಿ ಭಾಗಿಯಾಗಿರುವ ಜನರು ವ್ಯಾಟ್ಸಪ್​ ಗ್ರೂಪ್​​ ರಚನೆ ಮಾಡಿಕೊಂಡಿದ್ದರು. ಬೆಟ್ಟಿಂಗ್​ ಕ್ರಿಕೆಟ್​ನ ಐಡಿ ಮತ್ತು ಪಾಸ್​ವರ್ಡ್​ ಜತೆಗೆ ಕೋಡ್​ವರ್ಡ್​​ ಬಳಕೆ ಮಾಡಿ ದಂಧೆಯಲ್ಲಿ ಭಾಗಿಯಾಗುತ್ತಿದ್ದರು. ಕೊಟ್ವಾಲಿ ಪೊಲೀಸ್​ ಠಾಣರ ಮತ್ತು ಕಮಿಷನರೇಟ್​ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಕಿಶನ್​ಪೋಲ್​ ಮಾರುಕಟ್ಟೆಯಲ್ಲಿ 4.19 ಕೋಟಿ ರೂ ಹಾಗೂ ನಾಲ್ವರ ಬಂಧನ ಮಾಡಲಾಗಿದೆ ಎಂದು ಸಹಾಯಕ ಪೊಲೀಸ್​ ಆಯುಕ್ತ ಚಂದ್ ಮೀನಾ ತಿಳಿಸಿದ್ದಾರೆ.

ರಣಬೀರ್ ಸಿಂಗ್, ಕೃಪಾಲ್ ಸಿಂಗ್, ತೋಡರ್ಮಲ್ ರಾಥೋಡ್, ಮತ್ತು ಈಶ್ವರ್ ಸಿಂಗ್ ಬಂಧಿತರು. ನೆಟ್​ವರ್ಕ್​ನ ಮಾಸ್ಟರ್​ ಮೈಂಡ್​ ದುಬೈನಲ್ಲಿ ಕುಳಿತುಕೊಂಡು ದಂಧೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ವಿಶೇಷವೆಂದರೆ ದೇವಾಲಯದ ಹೆಸರಗಳ ಆಧಾರದ ಮೇಲೆ ಬೆಟ್ಟಿಂಗ್​ ದಂಧೆ ನಡೆಸಲು ಗುಂಪು ರಚನೆ ಮಾಡಲಾಗಿತ್ತು. ಆರೋಪಿಗಳಿಂದ ವಶಪಡಿಸಿಕೊಂಡ 9 ಮೊಬೈಲ್​ ಫೋನ್​​ಗಳಲ್ಲಿ 30ಕ್ಕೂ ಹೆಚ್ಚು ವ್ಯಾಟ್ಸಾಪ್​ ಗ್ರೂಪ್​ ಪತ್ತೆಯಾಗಿವೆ.

ABOUT THE AUTHOR

...view details