ಕರ್ನಾಟಕ

karnataka

ETV Bharat / jagte-raho

ಅಂತರಾಜ್ಯ ಮಾದಕ ವಸ್ತು ಮಾರಾಟಗಾರನ ಬಂಧನ : 16 ಕೆ.ಜಿ ಗಾಂಜಾ ವಶಕ್ಕೆ - ಅಕ್ರಮ ಗಾಂಜಾ ಮಾರಾಟ

ಒಡಿಶಾ ದಿಂದ ಗಾಂಜಾ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ವೈಟ್​ ಫೀಲ್ಡ್​​ ವಿಭಾಗದ ವರ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 16 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

inter-state-marijuana-seller-arrested-by-police
ಗಾಂಜಾ ಮಾರಾಟಗಾರನ ಬಂಧನ

By

Published : Aug 7, 2020, 8:43 PM IST

ಬೆಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ವ್ಯಕ್ತಿಯೊಬ್ಬನನ್ನು ವೈಟ್ ಫೀಲ್ಡ್ ವಿಭಾಗದ ವರ್ತೂರು ಪೊಲೀಸರು ಬಂಧಿಸಿದ್ದಾರೆ.

ಬಾಲಸೋರ್ ಜಿಲ್ಲೆ, ಒಡಿಶಾ ರಾಜ್ಯದ ಸೌದೆ ಗ್ರಾಮ ನಿವಾಸಿ ಶಿವಾನಿ ಶಂಕರ್ ಅಲಿಯಾಸ್ ರಾಜೇಂದ್ರ ಮಲ್ಲಿಕ್ ಬಂಧಿತ ಆರೋಪಿ. ಈತನಿಂದ ಸುಮಾರು 10 ಲಕ್ಷ ರೂ. ಮೌಲ್ಯದ 16 ಕೆಜಿಯಷ್ಟು ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ವರ್ತೂರು ಸಮೀಪದ ಬಳಗೆರೆ ರಸ್ತೆಯ ಶೋಭಾ ಅಪಾರ್ಟ್ಮೆಂಟ್ ಬಳಿ ಸಾರ್ವಜನಿಕರಿಗೆ ಮಾದಕ ವಸ್ತುವನ್ನು ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದ ಮಾಹಿತಿ ಪೊಲೀಸರಿಗೆ ಲಭಿಸಿತ್ತು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಒಡಿಶಾದಲ್ಲಿ ಖರೀದಿಸಿ ರೈಲಿನ ಮುಖಾಂತರ ಬೆಂಗಳೂರಿಗೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ಹೇಳಿದ್ದಾನೆ.

ಸದ್ಯ ಆರೋಪಿಯ ವಿರುದ್ದ 156/2020 ಕಲಂ 20 (ಬಿ) ಎನ್‌ಡಿಪಿಎಸ್ ಆಕ್ಟ್ ಪ್ರಕರಣ ದಾಖಲು ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details