ಮಂಡ್ಯ: ಗೂಡಂಗಡಿಯಲ್ಲಿ ಮದ್ಯ ಮಾರಾಟ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಯ ಮೇಲೆ ಅಂಗಡಿ ಮಾಲೀಕ ಲಾಂಗ್ನಿಂದ ಹಲ್ಲೆ ಮಾಡಲು ಮುಂದಾದ ಘಟನೆ ಮಳವಳ್ಳಿಯ ಸಿದ್ದಾರ್ಥನಗರದ ಹೊಸ ಬಡಾವಣೆಯಲ್ಲಿ ನಡೆದಿದೆ.
ಅಕ್ರಮ ಮದ್ಯ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ: ಲಾಂಗ್ ಹಿಡಿದು ಬೆದರಿಕೆ ಹಾಕಿದ ಮಾಲೀಕ! - ಮಳವಳ್ಳಿಯ ಸಿದ್ದಾರ್ಥನಗರದ ಹೊಸ ಬಡಾವಣೆ
ಗೂಡಂಗಡಿಯಲ್ಲಿ ಮದ್ಯ ಮಾರಾಟ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಯ ಮೇಲೆ ಅಂಗಡಿ ಮಾಲೀಕ ಲಾಂಗ್ನಿಂದ ಹಲ್ಲೆ ಮಾಡಲು ಮುಂದಾದ ಘಟನೆ ಮಳವಳ್ಳಿಯ ಸಿದ್ದಾರ್ಥನಗರದ ಹೊಸ ಬಡಾವಣೆಯಲ್ಲಿ ನಡೆದಿದೆ.

ಅಕ್ರಮ ಮದ್ಯ ಮಾರಾಟ, ಮಾಹಿತಿ ಕೊಟ್ಟಿದ್ದೇ ತಪ್ಪಾಯ್ತು, ಲಾಂಗ್ ಹಿಡಿದು ಅವಾಜ್ ಹಾಕಿದ ಮಾಲೀಕ...!
ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ: ಲಾಂಗ್ ಹಿಡಿದು ಬೆದರಿಸಿದ ಮಾಲೀಕ!
ಮಾದೇಶ ಎಂಬಾತ ಲಾಂಗ್ ಹಿಡಿದು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ಗ್ರಾಮದ ವ್ಯಕ್ತಿಯೊಬ್ಬ ಚುನಾವಣೆ ಸಂದರ್ಭದಲ್ಲಿ ಮದ್ಯ ಮಾರಾಟ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಲಾಂಗ್ ಹಿಡಿದುಕೊಂಡು ಬಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಬಡಾವಣೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.