ಕಲಬುರಗಿ: ಜಿಲ್ಲೆಯಲ್ಲಿ ಗಾಂಜಾ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು, ಚಿತ್ತಾಪುರ ತಾಲೂಕಿನ ಅಲ್ಲೂರ (ಬಿ) ಗ್ರಾಮದಲ್ಲಿ ತೊಗರಿ ಬೆಳೆಯ ಮಧ್ಯೆ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲಬುರಗಿ: ತೊಗರಿ ಹೊಲದಲ್ಲಿ ಗಾಂಜಾ ಬೆಳೆ, ಇಬ್ಬರು ಆರೋಪಿಗಳ ಬಂಧನ
ಗ್ರಾಮದ ಹಣಮಂತ ಕಟ್ಟಿ, ಭೀಮರಾಯ ಕಟ್ಟಿ ಎಂಬುವರು ತಮ್ಮ ತೊಗರಿ ಹೊಲದ ಮಧ್ಯದಲ್ಲಿ ಗಾಂಜಾ ಗಿಡಗಳನ್ನ ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ, 4.10 ಲಕ್ಷ ಮೌಲ್ಯದ 410 ಕೆ.ಜಿ ಗಾಂಜಾ ಗಿಡಗಳನ್ನ ಜಪ್ತಿಮಾಡಿದ್ದಾರೆ.
ಕಲಬುರಗಿ: ತೊಗರಿ ಹೊಲದ ಮದ್ಯದಲ್ಲಿ ಗಾಂಜಾ ಬೆಳೆ, ಇಬ್ಬರು ಆರೋಪಿಗಳ ಬಂಧನ
ಗ್ರಾಮದ ಹಣಮಂತ ಕಟ್ಟಿ, ಭೀಮರಾಯ ಕಟ್ಟಿ ಎಂಬುವರು ತಮ್ಮ ತೊಗರಿ ಹೊಲದ ಮಧ್ಯದಲ್ಲಿ ಗಾಂಜಾ ಗಿಡಗಳನ್ನ ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ, 4.10 ಲಕ್ಷ ಮೌಲ್ಯದ 410 ಕೆ.ಜಿ ಗಾಂಜಾ ಗಿಡಗಳನ್ನ ಜಪ್ತಿಮಾಡಿದ್ದಾರೆ.
ಸಿಪಿಐ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.