ದೊಡ್ಡಬಳ್ಳಾಪುರ: ಸಬ್ ಇನ್ಸ್‌ಪೆಕ್ಟರ್ ಗಜೇಂದ್ರ ನೇತೃತ್ವದಲ್ಲಿ ಗ್ರಾಮಾಂತರ ಪೋಲಿಸರು ಕಾರ್ಯಾಚರಣೆ ನಡೆಸಿ ಸುಮಾರು 60 ಸಾವಿರ ರೂ. ಮೌಲ್ಯದ ಗಾಂಜಾ ಗಿಡ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಹಾಡೋನಹಳ್ಳಿಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ: ಕುಂಬಳಕಾಯಿ ಬಳ್ಳಿ ಮರೆಯಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಯ ಬಂಧನ - Illegal marijuana crop
ಹಾಡೋನಹಳ್ಳಿ ಗ್ರಾಮದ ವೆಂಕಟೇಶ (45) ಗಾಂಜಾ ಗಿಡ ಬೆಳೆದ ಆರೋಪಿ. ತನ್ನ ಮನೆಗೆ ಹೊಂದಿಕೊಂಡಂತಿರುವ ಶೌಚಾಲಯ ಹಾಗೂ ಜಮೀನಿನ ನಡುವೆ 1 ಕೆಜಿ 900 ಗ್ರಾಂ ತೂಕದ ಸುಮಾರು 60 ಸಾವಿರ ರೂ. ಮೌಲ್ಯದ ಗಾಂಜಾ ಗಿಡ ಬೆಳೆದಿದ್ದು, ಕುಂಬಳಕಾಯಿ ಬಳ್ಳಿಯನ್ನು ಗಾಂಜಾ ಗಿಡ ಕಾಣದಂತೆ ಮರೆ ಮಾಡಿದ್ದ ಎನ್ನಲಾಗಿದೆ.
![ದೊಡ್ಡಬಳ್ಳಾಪುರ: ಕುಂಬಳಕಾಯಿ ಬಳ್ಳಿ ಮರೆಯಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಯ ಬಂಧನ Illegal marijuana crop, accused arrested doddaballapura](https://etvbharatimages.akamaized.net/etvbharat/prod-images/768-512-8843435-231-8843435-1600403417761.jpg)
ಹಾಡೋನಹಳ್ಳಿ ಗ್ರಾಮದ ವೆಂಕಟೇಶ (45) ಗಾಂಜಾ ಗಿಡ ಬೆಳೆದ ಆರೋಪಿ. ತನ್ನ ಮನೆಗೆ ಹೊಂದಿಕೊಂಡಂತಿರುವ ಶೌಚಾಲಯ ಹಾಗೂ ಜಮೀನಿನ ನಡುವೆ 1 ಕೆಜಿ 900 ಗ್ರಾಂ ತೂಕದ ಸುಮಾರು 60 ಸಾವಿರ ರೂ. ಮೌಲ್ಯದ ಗಾಂಜಾ ಗಿಡ ಬೆಳೆದಿದ್ದು, ಕುಂಬಳಕಾಯಿ ಬಳ್ಳಿಯನ್ನು ಗಾಂಜಾ ಗಿಡ ಕಾಣದಂತೆ ಮರೆ ಮಾಡಿದ್ದ ಎನ್ನಲಾಗಿದೆ.
ಡಿವೈಎಸ್ಪಿ ಟಿ.ರಂಗಪ್ಪ ಆದೇಶದ ಮೇರೆಗೆ. ಸಬ್ ಇನ್ಸ್‌ಪೆಕ್ಟರ್ ಗಜೇಂದ್ರ ನೇತೃತ್ವದಲ್ಲಿ ರಾಧಾಕೃಷ್ಣ, ಸುರೇಶ್, ವೆಂಕಟೇಶ್, ಮಧುಕುಮಾರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಗಾಂಜಾ ಗಿಡ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.