ಚಿಕ್ಕಬಳ್ಳಾಪುರ: ದಾಖಲೆ ಇಲ್ಲದ ಕಬ್ಬಿಣದ ಕಂಬಿಗಳನ್ನು ಅಕ್ರಮವಾಗಿ ಸಾಗಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ದಂಧೆಕೋರರನ್ನು ಬಂಧಿಸಿರುವ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ.
ಅಕ್ರಮವಾಗಿ ಕಬ್ಬಿಣದ ಕಂಬಿಗಳ ಸಾಗಾಟ: 6 ಲಾರಿ ಸಹಿತ ಐವರ ಬಂಧನ - ಗೌರಿಬಿದನೂರು ಪಟ್ಟಣದ ಹೊರವಲಯದ ಬಾಂಬು ಡಾಬಾ ಬಳಿ ಗುಜರಿ ಅಂಗಡಿ
ದಾಖಲೆ ಇಲ್ಲದ ಕಬ್ಬಿಣದ ಕಂಬಿಗಳನ್ನು ಅಕ್ರಮವಾಗಿ ಸಾಗಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ದಂಧೆಕೋರರನ್ನು ಬಂಧಿಸಿರುವ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ.
ಆಂಧ್ರದ ಹಿಂದೂಪುರದ ಕಬ್ಬಿಣ ಕಾರ್ಖಾನೆಯಿಂದ ಕಂಬಿ ತುಂಬಿಕೊಂಡು ಬೆಂಗಳೂರಿಗೆ ಸಾಗಾಟ ಮಾಡುವ ಲಾರಿಗಳಿಂದ ಅಕ್ರಮವಾಗಿ ಅಂಗಡಿಗಳಿಗೆ ಡಂಪ್ ಮಾಡಲಾಗುತ್ತಿತ್ತಂತೆ. ಇನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿವೈಎಸ್ಪಿ ರವಿಶಂಕರ್, ಗೌರಿಬಿದನೂರು ಪಟ್ಟಣದ ಹೊರವಲಯದ ಬಾಂಬು ಡಾಬಾ ಬಳಿ ಗುಜರಿ ಅಂಗಡಿ ನಡೆಸುತ್ತಿದ್ದ ನಾಗೇಶ್, ಜುಲ್ಫಿಕರ್ ಅಲಿ, ಬುಟ್ಟು ಸೇರಿದಂತೆ ದಂಧೆಯಲ್ಲಿ ತೊಡಗಿದ್ದ 5 ಜನರನ್ನು ಬಂಧಿಸಿ, 6 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕಬ್ಬಿಣದ ಕಂಬಿಗಳನ್ನು ಇಳಿಸಿಕೊಂಡು ಕೆಜಿಗೆ 33 ರೂ.ನಂತೆ ನೀಡಿ ಮನೆ ಕಟ್ಟುವವರಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಎಂದು ತಿಳಿದು ಬಂದಿದೆ.