ಕಲಬುರಗಿ:ಕಾರಿನಲ್ಲಿ ಅಕ್ರಮ ನಾಡಪಿಸ್ತೂಲು ಇಟ್ಟುಕೊಂಡು ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ನಾಡಪಿಸ್ತೂಲು ಇರಿಸಿಕೊಂಡು ಗಾಂಜಾ ಸಾಗಣೆ: ಇಬ್ಬರ ಬಂಧನ - ಕಲಬುರಗಿ ಅಪರಾಧ ಸುದ್ದಿ
ಕಾರ್ನಲ್ಲಿ ಅಕ್ರಮ ನಾಡಪಿಸ್ತೂಲು ಇಟ್ಟುಕೊಂಡು ಗಾಂಜಾ ಸಾಗಿಸುತ್ತಿದ್ದ ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದ ಲಾಲ ಅಹ್ಮದ್ ಚೌಕರಿ (28) ಹಾಗೂ ಬೆಂಗಳೂರು ಗ್ರಾಮಾಂತರ ಮೂಲದ ಚಂದ್ರಶೇಖರ ತಿರುಮಗೊಂಡನಹಳ್ಳಿ (37) ಅವರನ್ನು ಬಂಧಿಸಲಾಗಿದೆ.
ಇಬ್ಬರ ಬಂಧನ
ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದ ಲಾಲ ಅಹ್ಮದ್ ಚೌಕರಿ (28) ಹಾಗೂ ಬೆಂಗಳೂರು ಗ್ರಾಮಾಂತರ ಮೂಲದ ಚಂದ್ರಶೇಖರ ತಿರುಮಗೊಂಡನಹಳ್ಳಿ (37) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ಒಂದು ನಾಡಪಿಸ್ತಿಲ್, ಒಂದು ಜೀವಂತ ಗುಂಡು, ಒಂದು ಕೆ.ಜಿ.ಗೂ ಅಧಿಕ ಗಾಂಜಾ, 2,94,000 ರೂ. ನಗದು, 4 ಮೊಬೈಲ್ ಹಾಗೂ ಒಂದು ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಆರೋಪಿಗಳ ಬಳಿ ಚಿಕ್ಕದಾದ ಗಾಂಜಾ ತೂಗಲು ತಕ್ಕಡಿ ಕೂಡ ಪತ್ತೆಯಾಗಿದೆ. ಸದ್ಯ ಆರೋಪಿಗಳಿಂದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.