ಕರ್ನಾಟಕ

karnataka

ETV Bharat / jagte-raho

ಬೆಳಗಾವಿ: ಮಕ್ಕಳೆದುರೇ ಚಾಕುವಿನಿಂದ ಹೆಂಡತಿಗೆ ಇರಿದು ಕೊಂದ ಪಾಪಿ ಪತಿ - ಪತಿಯಿಂದ ಪತ್ನಿ ಹತ್ಯೆ

ಹೆಂಡತಿ ಜೊತೆಗೆ ಜಗಳ ಮಾಡುವುದಿಲ್ಲ, ಸರಿಯಾಗಿ‌ ಜೀವನ ನಡೆಸುವುದಾಗಿ ಮಾತು ಕೊಟ್ಟು ಬೆಳಗಾವಿಗೆ ಕರೆದುಕೊಂಡು ಬಂದಿದ್ದ. ಆದರೆ ಇಂದು ಸಂಜೆ ಕುಡಿದು ಬಂದ ಆರೋಪಿ ಮಕ್ಕಳೆದುರೇ ಹೆಂಡತಿಗೆ ಚಾಕುವಿನಿಂದ ಮೂರು ಬಾರಿ ಇರಿದು ಹತ್ಯೆ ಮಾಡಿದ್ದಾನೆ.

husband-murder-her-wife-in-belagavi
ಬೆಳಗಾವಿ: ಮಕ್ಕಳೆದುರೇ ಹೆಂಡತಿಯನ್ನು ಕೊಂದ ಪಾಪಿ ಪತಿ

By

Published : Dec 18, 2020, 10:41 PM IST

ಬೆಳಗಾವಿ: ತಂದೆಯೊಬ್ಬ ಮಕ್ಕಳೆದುರೇ ಹೆಂಡತಿಯನ್ನು ಹತ್ಯೆ ಮಾಡಿ ಪೊಲೀಸ್​​​ ಠಾಣೆಗೆ ಬಂದು ಶರಣಾದ ಘಟನೆ ಇಲ್ಲಿ‌ನ‌ ಆಟೋ ನಗರದಲ್ಲಿ ನಡೆದಿದೆ.

ಬೆಳಗಾವಿ: ಮಕ್ಕಳೆದುರೇ ಹೆಂಡತಿಯನ್ನು ಕೊಂದ ಪಾಪಿ ಪತಿ

ಆಟೋ ನಗರದ ಸಕ್ಕುಬಾಯಿ ಲಮಾಣಿ (35) ಕೊಲೆಯಾದ ಹೆಂಡತಿ. ಸವದತ್ತಿ ತಾಲೂಕಿನ ರಾಮಾಪೂರ ಗ್ರಾಮದ ನಿವಾಸಿ ಪುಂಡಲೀಕ ಲಮಾಣಿ ಕೊಲೆ ಮಾಡಿದ ಪಾಪಿ ಪತಿ. ಈತ ವೃತ್ತಿಯಲ್ಲಿ‌ ಆಟೋ‌ ಓಡಿಸಿಕೊಂಡು‌ ಜೀವನ ನಡೆಸುತ್ತಿದ್ದ. ಆದರೆ ಈತನಿಗೆ ಹೆಂಡತಿ ಮೇಲೆ ಅನುಮಾನ ಇದ್ದಿದ್ದರಿಂದ ಪದೇ ಪದೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಓದಿ: ಗುರುವಾರ ಮದುವೆ, ಶುಕ್ರವಾರ ಆತ್ಮಹತ್ಯೆ: ನವ ಜೋಡಿಯ ಸಾವಿನ ಹಿಂದೆ ಹಲವು ಅನುಮಾನ

ಕಳೆದ ಒಂದು ತಿಂಗಳಿಂದ ಜಗಳ ಮಾಡಿಕೊಂಡು ತವರು ಸೇರಿದ್ದ ಹೆಂಡತಿಯನ್ನು ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾಡಿಸಿದ್ದ. ಹೆಂಡತಿ ಜೊತೆಗೆ ಜಗಳ ಮಾಡುವುದಿಲ್ಲ, ಸರಿಯಾಗಿ‌ ಜೀವನ ನಡೆಸುವುದಾಗಿ ಮಾತು ಕೊಟ್ಟು ಬೆಳಗಾವಿಗೆ ಕರೆದುಕೊಂಡು ಬಂದಿದ್ದ. ಆದರೆ ಇಂದು ಸಂಜೆ ಕುಡಿದು ಬಂದು ಮಕ್ಕಳೆದುರೇ ಹೆಂಡತಿಗೆ ಚಾಕುವಿನಿಂದ ಮೂರು ಬಾರಿ ಇರಿದು ಹತ್ಯೆ ಮಾಡಿದ್ದಾನೆ.

ಈ ವೇಳೆ‌ ಬಿಡಿಸಲು ಬಂದ ಮಗಳ ಕೈಗೂ ಗಾಯವಾಗಿದ್ದು, ಇನ್ನು ಕೊಲೆ ಮಾಡಿದ ಆರೋಪಿ ಆಟೋದಲ್ಲಿ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಮಾಳಮಾರುತಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details