ಮಹಾರಾಷ್ಟ್ರ :ಪತ್ನಿಯ ಸಾವಿನಿಂದ ಮನನೊಂದ ಪತಿ ಆಕೆಯ ಚಿತೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿಯೂ ಬದುಕಿದ್ದ. ಆದರೆ, ಬಳಿಕ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಭಂಗರಂ ತಲೋಧಿ ಎಂಬ ಗ್ರಾಮದಲ್ಲಿ ನಡೆದಿದೆ.
ಕಿಶೋರ್ ಖಾತಿಕ್ ಹಾಗೂ ರುಚಿತಾ ಚಿತ್ತಾವರ್ ಎಂಬುವರು ಕಳೆದ ಮಾರ್ಚ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರುಚಿತಾ ಚಿತ್ತಾವರ್ ಮೂರು ತಿಂಗಳ ಗರ್ಭಿಣಿ ಕೂಡ ಹೌದು.. ಸೋಮವಾರ ರಾತ್ರಿ ಮೂತ್ರ ವಿಸರ್ಜನೆಗೆಂದು ಹೋದ ಆಕೆ, ಬಹಳ ಹೊತ್ತಾದರೂ ಹಿಂದಿರುಗಿ ಬರದಿದ್ದನ್ನು ಕಂಡು ಗಾಬರಿಯಾದ ಕುಟುಂಬಸ್ಥರು ಹುಡುಕಾಡಿದ್ದಾರೆ. ಆದರೆ, ಆಕೆ ಮನೆಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.