ಸೂರತ್: ಗುಜರಾತ್ನ ಸೂರತ್ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದಾಗಿ ಮಾನವ ಕಳ್ಳಸಾಗಣೆಯ ದೊಡ್ಡ ಜಾಲವೊಂದು ಬಯಲಾಗಿದೆ.
ಮಾನವ ಕಳ್ಳಸಾಗಣೆ: ಅಪ್ರಾಪ್ತೆಯರು ಸೇರಿ 30 ಯುವತಿಯರ ರಕ್ಷಣೆ - Surat Police
ಜಾರ್ಖಂಡ್‌ನಿಂದ ಕರೆದೊಯ್ಯಲಾಗುತ್ತಿದ್ದ ಆರು ಬಾಲಕಿಯರು ಸೇರಿದಂತೆ 30 ಯುವತಿಯರನ್ನು ಸೂರತ್ ಪೊಲೀಸರು ರಕ್ಷಿಸಿದ್ದಾರೆ.
ಮಾನವ ಕಳ್ಳಸಾಗಣೆ
ಜಾರ್ಖಂಡ್‌ನಿಂದ ಕರೆದೊಯ್ಯಲಾಗುತ್ತಿದ್ದ ಆರು ಬಾಲಕಿಯರು ಸೇರಿದಂತೆ 30 ಯುವತಿಯರನ್ನು ಸೂರತ್ ಪೊಲೀಸರು ರಕ್ಷಿಸಿದ್ದಾರೆ. ಸಂತ್ರಸ್ತ ಯುವತಿಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.
ಯುವತಿಯರನ್ನು ಜಾರ್ಖಂಡ್‌ನಿಂದ ಕರೆತಂದ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.