ಕರ್ನಾಟಕ

karnataka

ETV Bharat / jagte-raho

ಗರ್ಭಿಣಿ ಮಗಳನ್ನು ಉಸಿರುಗಟ್ಟಿಸಿ 'ಮರ್ಯಾದಾ'ಗೇಡು ಹತ್ಯೆ: ತಂದೆ-ತಾಯಿ ಅರೆಸ್ಟ್​ - ಗರ್ಭಿಣಿ ಮಹಿಳೆ ಕೊಲೆ

ಜೋಗುಲಾಂಬಾ-ಗದ್ವಾಲ್ ಜಿಲ್ಲೆಯಲ್ಲಿ ಗರ್ಭಿಣಿ ಮಗಳನ್ನು ಉಸಿರುಗಟ್ಟಿಸಿ ಮರ್ಯಾದಾ ಹತ್ಯೆ ಮಾಡಿದ್ದ ಆರೋಪದಡಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿ ಗರ್ಭಿಣಿ ಆಗಿದ್ದಳು. ಅದೇ ಹುಡುಗನ್ನು ಮದುವೆ ಆಗುವುದಾಗಿ ಗರ್ಭಪಾತಕ್ಕೆ ನಿರಾಕರಿಸಿದ ಯುವತಿಯನ್ನು ಪೋಷಕರೇ ಹತ್ಯೆ ಮಾಡಿದ್ದಾರೆ.

Honour killing
ಮರ್ಯಾದೆ ಹತ್ಯೆ

By

Published : Jun 9, 2020, 7:12 PM IST

ಹೈದರಾಬಾದ್: ತೆಲಂಗಾಣದ ಜೋಗುಲಾಂಬಾ-ಗದ್ವಾಲ್ ಜಿಲ್ಲೆಯಲ್ಲಿ ಗರ್ಭಿಣಿ ಎಂದು ತಿಳಿದಿದ್ದರೂ ಮಗಳನ್ನು ಉಸಿರುಗಟ್ಟಿಸಿ ಮರ್ಯಾದಾ ಹತ್ಯೆ ಮಾಡಿದ್ದ ಆರೋಪದಡಿ ದಂಪತಿಯನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಮೃತ ದಿವ್ಯಾ (20) ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕಾಲೇಜಿನಲ್ಲಿ ಪದವಿ ಓದುತ್ತಿದ್ದಳು. ಅವಳು ಮತ್ತೊಂದು ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು, ಲಾಕ್​ಡೌನ್​ ಜಾರಿಯಾಗುವ ಎರಡು ದಿನಗಳ ಮುಂಚೆ ಮನೆಗೆ ಮರಳಿದ್ದಳು ಎಂದು ಶಾಂತಿನಗರ ಪೊಲೀಸರು ತಿಳಿಸಿದ್ದಾರೆ.

ಅನುಮಾನಾಸ್ಪದವಾಗಿ ಕಾಣುತ್ತಿದ್ದ ದಿವ್ಯಾಳನ್ನು ಪೋಷಕರು ಶನಿವಾರ ವೈದ್ಯಕೀಯ ಪರೀಕ್ಷೆಗಾಗಿ ಕರ್ನೂಲ್‌ಗೆ ಕರೆದೊಯ್ದಿದ್ರು. ತಪಾಸಣೆಯಲ್ಲಿ ಆಕೆ ಗರ್ಭಿಣಿ ಎಂದು ತಿಳಿದುಬಂದಾಗ, ಪೋಷಕರು ಗರ್ಭಪಾತ ಮಾಡಬೇಕೆಂದು ಬಯಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗರ್ಭಪಾತಕ್ಕೆ ದಿವ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಳು. ತನ್ನ ಪ್ರೇಮಿಯನ್ನು ಮದುವೆ ಆಗಬೇಕೆಂಬ ಬಯಕೆಯನ್ನು ಸಹ ಪೋಷಕರ ಮುಂದೆ ವ್ಯಕ್ತಪಡಿಸಿದ್ದಳು. ಗರ್ಭಧಾರಣೆಗೆ ನಿರಾಕರಣೆ ಮತ್ತು ಬೇರೆ ಜಾತಿಯ ಹುಡುಗನ ಮದುವೆ ಆದರೆ ಕುಟುಂಬಕ್ಕೆ ಅಪಖ್ಯಾತಿ ಬರುತ್ತದೆ ಎಂದು ಅವಳನ್ನು ಕೊಲೆ ಮಾಡಲು ಪೋಷಕರು ನಿರ್ಧರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಭಾನುವಾರ ಬೆಳಗ್ಗೆ ದಿವ್ಯಾ ಮಲಗಿದ್ದಾಗ ಅವಳ ಪೋಷಕರು ದಿಂಬಿನಿಂದ ಮುಖ ಮುಚ್ಚಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಮರುದಿನ ಬೆಳಗ್ಗೆ ಹಠಾತ್ ಹೃದಯ ಸ್ತಂಭನದಿಂದ ದಿವ್ಯಾ ಸಹಜ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಪೋಷಕರು ಯತ್ನಿಸಿದ್ದಾರೆ. ವಿಚಾರಣೆಯ ವೇಳೆ ಪೋಷಕರು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details